ಉತ್ತಂಗಿಯವರನ್ನು ನೆನೆದು

ಉತ್ತಂಗಿ! ಜೀವನದ ಸತ್ಯದಿಂದೆತ್ತರಕೆ ಬೆಳೆದು ಬಾಗಿದ ವೃಕ್ಷ; ಎಲ್ಲ ಋತುಮಾನಕ್ಕು ಎದೆಗೊಟ್ಟು, ಎಂಥ ಕಾಲಕು ಚಿಗುರುನಗೆ ನಕ್ಕು ಹೂಗೊಂಚಲವ ಹಿಡಿದು; ಎಲೆಯ ಮರೆಗಿವೆ ಹರಕೆ ಹೊತ್ತ ಹಣ್ಣುಗಳೆಷ್ಟೊ [ಇಳಿಸಿಕೊಳ್ಳುವರಾರು?] ಮನೆಯಿಂದ ಮನೆಗೆ ಸರ್‍ವಜ್ಞಮೂರ್‍ತಿಯ ನಿಲವ […]

ಶತಾಯುಷಿ ವಿಶ್ವೇಶ್ವರಯ್ಯನವರು

ಘನತೆ-ಗೌರವ-ಸಮತೆಗಿಷ್ಟಗಲ ತೆರೆದ ಕಿವಿ. ಕ್ಷಿತಿಜದಂಚಿಗೆ ತಾಗಿ ಆಚೆ ಹೊಳೆಯುವ ದೃಷ್ಟಿ. ಯೋಜನೆಯ ಮೇಜು ಹಣೆ, ತುಟಿ-ವಿನಯ-ಸಂತುಷ್ಟಿ. ನೇರ ಬಾಳಿದ ಮೂಗು, ದುಡಿಮೆ-ದೀಕ್ಷಾ-ತವಸಿ. ಶುಭ್ರ ಜರಿಪೇಟೆ: ಮೇಧಾಕಿರೀಟ; ಶಾಂತರಸ. ಓರಣಕೆ ತೋರಣವಕಟ್ಟಿದುಡುತೊಡುಗೆ. ನಡಿಗೆ- ನೂರು ಸಂವತ್ಸರದ […]

ಓ ನಿಲ್ಲಿ

ಓಯ್ ಕಮಲಗಳೇ ತುಸು ತಾಳಿ ಅರಳಬೇಡಿ ಏಯ್ ಮೋಡಗಳೇ ತುಸು ತಾಳಿ ಓಡಬೇಡಿ ಅಯ್ಯೊ ಕವಿಸಮಯಗಳೇ ತಾಳಿ ಜಾರಬೇಡಿ ನಾನೀಗ ಕಚೇರಿಯೊಂದರಲ್ಲಿ ಒಂದು ಇನ್‌ಕಂ ಸರ್‍ಟಿಫಿಕೇಟ್‌ಗಾಗಿ ಉತ್ಕಟ ತುದಿಗಾಲಲ್ಲಿ ನಿಂತು ಕಾಯುತ್ತಿರುವೆ ಮುಂಜಾನೆಯಿಂದ *****

ಬಿಸಮಿಲ್ಲಾರ ಶಹನಾಯಿವಾದನ ಕೇಳಿ

ಒಂದೆ ಉಸಿರಿಗೆ ಹಸಿರ ಹೊಮ್ಮಿಸುವ; ನೂರು ಬಗೆ ಭಾವ ಕುಸುಮವನೆತ್ತಿ ಗಾಳಿಸುಳಿಯಲಿ ಹೀಗೆ ನರುಗಂಪ ತೇಲಿಸುವ; ಹಂಬಲದ ಸವಿದನಿಗೆ ತುಂಬಿ ಆಲಿಸುವ; ಮನಸಿನ ಮಧ್ಯಬಿಂದುವಿಗೆ ಕನಸು-ಕಾಮನಬಿಲ್ಲು ವರ್‍ತುಳವ ರಚಿಸಿ, ನೆಲ- ಮುಗಿಲನೊಂದು ಸಲ ಬಂಧಿಸಿ […]

ಕೂಪ ಮಂಡೂಕ

– ೧ – ನೀನೆಲ್ಲಿ ಈಗ ಹೆಗಲಿಗೆ ಹೆಗಲ ಕೊಟ್ಟವನು ಹಾಯಿಯನ್ನುರುಟುರುಟು ಊದಿದವನು, ದಾರಿಯುದ್ದಕ್ಕು ರಹದಾರಿ ಗಿಟ್ಟಿಸಿ ದಿಳ್ಳಿ ದ್ವೀಪಾಂತರಕ್ಕೆ ಕೈ ಕೊಟ್ಟ ಸಖನು? ನಟ್ಟ ನಡುದಾರಿ ತೇಗುವ ತೋಟದೊಳಗಡೆಗೆ ಮೂಗುಮಟ ಕುಡಿದ ತಂಗೊಳದ […]

ವಿದ್ಯಾಭವನದ ಗೋಪುರದಿಂದ

ಅತ್ತ ಬೆಳುವೊಲ, ಇತ್ತ ಮಲೆನಾಡ ಜರಿ ಸೆರಗು. ಸುತ್ತು ಪರ್‍ವತ ನೀಲಿ. ಗುಡ್ಡ ಕೊಳ್ಳವ ಇಳಿದು- ಏರಿ ಚಿಗುರಿದ ಹಸಿರು. ಕೆಲದಿ ಕನ್ನಡಿ ಹಿಡಿದು ನಿಂತ ಕೆಲಗೇರಿ ಕೆರೆ. ಗೆರೆ ಕೊರೆದು ಬರುವ ಜುಗು- […]

ವಿದ್ಯಾಭವನ

ಹತ್ತು ನಿಟ್ಟಿನ ಗಾಳಿ-ಬೆಳಕು-ಸವಿ-ಭಾವನೆಗೆ ಸ್ವಚ್ಛಂದದಲಿ ನೂರು ಕಿಟಕಿ ಬಾಗಿಲು ತೆರೆದು; ಭವ್ಯ ವಿದ್ಯಾಭವನ ಜ್ಞಾನ ವಿಜ್ಞಾನ, ಅದು ಇದು- ಎಂಬುದೆಲ್ಲ ಹದವರಿತಿಲ್ಲ ಹುದುವಾಳ್ಗೆ. ವೀರ ಅಶ್ವಾರೋಹಿ ಚೆನ್ನಮ್ಮ, ನಾಡವರ ನುಡಿಯೊಡೆಯ ವಿಶ್ವಮಾನವ ಮೂರ್‍ತಿ ಸರ್‍ವಜ್ಞ. […]

ಅರುವತ್ತರೈಸಿರಿ

ಎತ್ತರದ ನಿಲವು; ಮನದಲಿ ನೂರು ನಕ್ಷತ್ರ- ಗಳ ವಿಲಕ್ಷಣ ಹೊಳವು. ವಿಸ್ತಾರದನುಭವದ ಸ್ವಸ್ತಿ ಬಿತ್ತರದ ಹಣೆ; ಸುಸ್ಥಿರನೋಟ ಬಲಿದ ಯೋಧೃವಾಣಿಯ ನಿಷ್ಠೆ. ಕೃತಿ ಮಹೋನ್ನತ ಪಾತ್ರ. ದೊಡ್ಡ ಮಳೆ ಜಡಿದು, ನೆಲವೆಲ್ಲ ನೀರನು ಕುಡಿದು, […]

ಇಷ್ಟು ಇಷ್ಟೆಂದೇಕೆ?

ಇಷ್ಟು ಇಷ್ಟೆಂದೇಕೆ ಕಟ್ಟೆ ಕಟ್ಟುವೆ ಮರೀ ಇದ್ದದ್ದು ಅರಿಯುವಾ ಜತೆಗೆ ಇಲ್ಲದ್ದೂ ಸರಿ ನೀನು ಇಷ್ಟೆಂದದ್ದು ಅವನಿಗಷ್ಟಾದೀತು ನಿನಗೆ ಇಶ್ಶಿಯಾದ್ದವಗೆ ಇಷ್ಟ ನಿನ್ನ ಕಣ್ಣಿನ ಸೂಜಿ ತುದಿಯಷ್ಟು ತೂತೊಳಗೆ ಜಗ ಹೊಕ್ಕು ಬರುವದು ಬಹಳೇ […]

ಕಾಣಿಕೆ

ಎಣಿಸದಿದ್ದರು ಕಾಲ ಉರುಳುವದು. ಚಿಕ್ಕೆಗಳ ಗಣಿಸದಿದ್ದರು ಬೆಳಕು ತುಡಿಯುವುದು. ತಂತಾನೆ ನೆಲದಾಳದಲ್ಲಿ ಹದಗೊಂಡ ಬೀಜದ ಮೊಳಕೆ ಮಣ್ಣ ಬೀರಿದೇಳುವದು; ಚೈತ್ರ ವೈಶಾಖಗಳ ಸೂತ್ರವಾಡಿಸಿದಂತೆ ಚಿಗುರುವುದು ಮೋಟುಮರ. ಹೊಳೆಯ ದಾಟಿದ ಮೇಲೆ ಕೊಳೆಯ ತೊಳೆವವರಾರು? ಈಜಿದರೆ […]