ಜೀವಜೀವಾಳದಲಿ ಕೂಡಿದವಳು

೧ ಸಣ್ಣ ಮನೆಯನು ತುಂಬಿ ನುಣ್ಣಗಿನ ದನಿಯಲ್ಲಿ ಬಣ್ಣವೇರಿದ ಹೆಣ್ಣು ಹಾಡುತಿಹಳು. ಕೈತುಂಬ ಹಸಿರು ಬಳೆ ಹಣೆಗೆ ಕುಂಕುಮ ಚಂದ್ರ ಜಡೆತುಂಬ ಮಲ್ಲಿಗೆಯ ಮುಡಿದಿರುವಳು. ೨ ಹೆಜ್ಜೆ ಹೆಜ್ಜೆಗಳಲ್ಲಿ ನವಿಲನಾಡಿಸುತಿಹಳು ಮಾತು ಮಾತಿಗೆ ಮುತ್ತು […]

ಸೂತಕವಿತ್ತೆ ಅವರ ಮುಖಗಳಲ್ಲಿ

ಹೆಣ ಸುಟ್ಟು ಬಂದ ಸೂತಕವಿತ್ತೆ ಅವರ ಮುಖಗಳಲ್ಲಿ ಮಳೆ ನಿಂತ ಮೇಲೆ ಗಾಳಿಗೆ ಅಲುಗದೆ ನಿಂತಿವೆ ಮರಗಳು ಇಡೀ ವ್ಯೋಮ ಮಂಡಲವನೆ ಆವರಿಸಿರುವ ಅಖಂಡ ನಿರ್‍ಲಿಪ್ತವೆ ಮನೆ ಮಾಡಿನಿಂದಿಳಿದ ಕೊನೆಯ ಮಳೆ ಹನಿಗಳಿಗೆ ಅವರ […]

ಜೊತೆ

ಬಾನಂಗಣದಲಿ ಕಂಕಣ ಕಟ್ಟಿದೆ ಚಂದಿರ ರೋಹಿಣಿಯರ ಬಳಸಿ, ಕಿರುಮೋಡವು ಹೆಡೆಯಾಡಿಸಿ ನಲಿದಿದೆ ಗಾಳಿಯ ಪುಂಗಿಯನನುಸರಿಸಿ. ಅಲ್ಲಿಂದಿಲ್ಲಿಗೆ ಸಾವಿರ ಮಲ್ಲಿಗೆ- ಚಿಕ್ಕೆಯ ಸೇತುವೆ ತೂಗಿಹುದು, ಇರುಳಿನ ಹೆಜ್ಜೆಯ ಗೆಜ್ಜೆಯ ಮೆಲ್ಲುಲಿ ಗಿರಿ ವನ ಕೊಳದಲ್ಲಿ ಸುಳಿದಿಹುದು. […]

ನಲುಮೆಯ ಕರೆ

ಅಲ್ಲೆ ಇರು, ಇಲ್ಲೆ ಇರು, ಎಲ್ಲೊ ಎಂತಾದರಿರು ನನ್ನ ನಲುಮೆಯ ಕರೆಗೆ ಓಗೊಡುತಿರು; ಒಮ್ಮೆ ಉದ್ವೇಗದಲಿ, ಒಮ್ಮೆ ಸಂತೃಪ್ತಿಯಲಿ ‘ಓ’ ಎಂಬ ಸವಿದನಿಯ ಸೋಂಕಿಸುತಿರು. ದೂರದಿಂ ತೇನೆಯುಲಿ ಸಾರುವಂತೆ ಮರಳಿ ಬೆಳುದಿಂಗಳಲಿ ಕರಗುವಂತೆ! ಆವ […]

ನನ್ನ ಹೊಂದಾವರೆ

ನನ್ನ ಕನಸಿನ ಹೊನ್ನ ತಾವರೆಯ ಹೂವರಳಿ ಎನ್ನ ಬೊಗಸೆಯೊಳಿಂದು ಕಂಗೊಳಿಸಿದೆ; ಎನ್ನಿನಿಯ ಭಾವಗಳ ಮಧುರ ಮಕರಂದವೂ ಮೃದುಲ ದಲದಲಗಳಲಿ ಪರಿಮಳಿಸಿದೆ! ಮಾನಸ ಸರೋವರದ ಶಾಂತಿಸೌಖ್ಯಾಭೋಗ ಸಕಲ ಸೌಂದರ್‍ಯದೀ ಮೊಗ್ಗೆಯಾಗಿ ನೇಹ ನೇಸರನೊಂದು ಮೀಸಲದ ಕಿರಣದೆಡೆ […]

ತಾಯಿಯಂತೆ

ಮಗನ ರಕ್ತ ಸುರಿವ ಗಾಯಕ್ಕೆ ಹಚ್ಚಿದ ತೆಂಗಿನೆಣ್ಣೆಯ ಮದ್ದು ಸೀರೆ ಹರಿದು ಕಟ್ಟಿದ ಬಟ್ಟೆ ತಾಯಿ ಸತ್ತು ವರ್‍ಷಗಳಾದರೂ ಮಾಯ್ದ ಗಾಯದ ಕಲೆಯೊಂದಿಗೆ ನೋವಾಗಿ ಉಳಿದುಕೊಂಡಿದೆ. ನೆನಪಾದಾಗಲೆಲ್ಲ ಅದ ಮುಟ್ಟಿ ನೇವರಿಸುವನು ಆ ಗಾಯ […]

ನನ್ನೊಲವು

ಹುಲ್ಲು ಗದ್ದೆಯ ಹೂವು ನೆಲದೆದೆಯನಪ್ಪಿದೊಲು ಅನಿತು ನನ್ನೆದೆ ಸನಿಹಕಿರುವಳವಳು; ದಣಿದ ಅವಯವಗಳಿಗೆ ನಿದ್ದೆ ಮುದ್ದಾದಂತೆ ನನಗನಿತು ಸವಿಯಾಗಿ ತೋರಿದವಳು. ತನಿ ಶರತ್ಕಾಲದಲ್ಲಿ ಅರ್‍ಪಣಾನಂದದಲಿ ನದಿ ಮಹಾಪೂರದಿಂದೋಡುವಂತೆ ತುಂಬಿ ಹರಿಯುವ ನನ್ನ ಬಾಳು; ಅವಳಲ್ಲಿರುವ ಪ್ರೇಮಬಾಹುಳ್ಯವನೆ […]

ರಸ‌ಋಷಿ

೧ ಆಹ! ಮಧುಮಾಸವೈತಂದಿಹುದು. ಬನಕೆಲ್ಲ ಚಿಗುರು ಹೂಗಳ ಹುಚ್ಚು ಹಿಡಿದಿಹುದು. ಜೀವನದ ರಸಿಕತೆಯ ಮೂರ್‍ತಿಮತ್ತಾಯಿತೆನೆ ಆ ಮರದ ತಳಿರ ತಣ್ಣೆಳಲಲ್ಲಿ ಮುಪ್ಪಾದ- ಅಲ್ಲಲ್ಲ- ಹರೆಯ ಒಪ್ಪಂಬೂಸಿ ಕಪ್ಪು ಕಾಣಿಕೆಯಿತ್ತ ಉಮರ ಖಯ್ಯಾಮನದೊ ನಲ್ಗಬ್ಬಮಂ ಪಿಡಿದು […]

ಸ್ವರ್‍ಣಪಕ್ಷಿ

ಬ್ರಹ್ಮಾಂಡದ ಬಿರುಮೊಟ್ಟೆಯನೊಡೆದು ಪಿಂಡಾಂಡದ ತನಿಗೆಂಡವ ಪಡೆದು ಇರುಳಿನ ಕಬ್ಬಿಣ ಪಂಜರ ಮುರಿದು ಹಾರಿತು ಸ್ವರ್‍ಣಾರುಣ ಪಕ್ಷಿ! ಮೂಡಣ ಬಾನಿನ ಉಷೆ ಸಾಕ್ಷಿ! ಮೇಘಮಂಡಲದ ಬಾಗಿಲ ತೆರೆದು ಜಗದಗಲವ ಮುಗಿಲಗಲವನಳೆದು ತಾರಾಲೋಕದ ಕಣ್ಣನು ಸೆಳೆದು ಸಾರಿತು […]

ಪುಣ್ಯ

ಮಂತ್ರಿ ಮಹಾಶಯರ ಕಾರಿನ ಹಿಂದಿನ ಸೀಟಿನಲ್ಲಿ ಮುದುಡಿ ಕೂತಿದ್ದವು ಹಾರದ ಹೂವು ಕಲ್ಲು ದೇವರ ಗುಡಿಗೋ ಕಲ್ಲು ಸಕ್ಕರೆಯಂಥ ಹುಡುಗಿಯರ ಮುಡಿಗೋ -ಸಲ್ಲಲೂ ಪುಣ್ಯ ಬೇಕು! *****