ಲಾಜವಾಬು

ಅಮೇರಿಕದ ಸೀಡರ್‌ ಫಾಲ್ಸ್‌ನಲ್ಲಿ ತಂಗಿದ್ದಾಗ
ವಿಚಾರಿಸಿದೆ ನೆರೆಮನೆಯ ಬಿಳಿ ಹೆಣ್ಣನ್ನ,
“ನಿಮಗೆ ಎಷ್ಟು ಜನ ಮಕ್ಕಳು ಸಿಸ್ಟರ್?”
ಉತ್ತರಿಸಿದಳು ಹೊರಳಿಸುತ್ತ ಚೆಲು ನೀಲಿಗಣ್ಣನ್ನ:
“ನನಗೆರಡು, ನನ್ನ ಗಂಡನಿಗೆರಡು,
ಸದ್ಯಕ್ಕೆ ನಮ್ಮಿಬ್ಬರಿಗೆ ಒಂದು ಮಿಸ್ಟರ್!”
*****