ವರ್‍ತುಳ

ಈ ಮನದ ಮಧ್ಯಬಿಂದುವಿನಿಂದ ಹೊರಟ ವ- ರ್‍ತುಳ ರೇಖೆ ಜೀವ ಜೀವಿಯ ಸುತ್ತಿ, ಬಾನಲೆವ ಬೆಳಕನಾಲಿಂಗಿಸಿದೆ; ಗಾಳಿಯಲಿ ಯಾವುದೋ ಗುಡಿಯ ಘಂಟಾನಾದ, ನಾದದೊಳಗೂ ಪ್ರತಿಮೆ. ನೆಳಲು ಬೆಳಕಿನ ನಡುವೆ ಮಡುವಾಗಿ ಮಲಗಿಹುದು ಯುಗ ಯುಗದ […]

ನೆಲ-ಮುಗಿಲು

ಕಣ ಕಣದ ಗತಿ-ಮತಿಯ ಗುರುತಿಸು, ಆದರೀಗಲೆ ಅದರ ಇತಿವೃತ್ತವನು ಬರೆಯದಿರು, ನೀನಾಗಿ ಕೊರೆಯದಿರು ದಾರಿಯನು, ಬಯಲ ಬಿಡುಗಡೆ ನುಂಗಿ ನೀರು ಹಿಡಿಯಲಿ, ವಿಶ್ವವೆಲ್ಲವು ತೆರೆದ ಬಾಗಿಲೆ. ಹಾರಿ ಹಕ್ಕಿಯಾಗಲಿ: ತುತ್ತ ತುದಿಗಿದೆ ಚುಕ್ಕಿ. ಮೀರಿ […]

ಭಾರತ ಸುಪುತ್ರನ ಕೊನೆಯ ಬಯಕೆ

ಭಾರತದ ನಾಲ್ವತ್ತು ಕೋಟಿಯ ನೆನೆದು ಎತ್ತಿಹೆ ಲೇಖನಿ, ಸ್ವಚ್ಛ ಬಿಳಿ ಕಾಗದದಿ ಮೂಡಿದೆ ಹಾಡಿದೊಲು ನನ್ನೊಳದನಿ. ಮೃತ್ಯುಪತ್ರವನೀಗಲೇ ನಾನೇಕೆ ಬರೆದೆನೊ ತಿಳಿಯದು ವರ್‍ತಮಾನವು ಭೂತವಾಗದೆ ಆ ಭವಿಷ್ಯವು ತೆರೆಯದು. ಇರುವ ಪ್ರೀತಿಯ ಧಾರೆಯೆರೆದಿರಿ, ಮಮತೆ […]

ನೆಹರು : ಶ್ರದ್ಧಾಂಜಲಿ

ಬಾನ ನೀಲಿಯ ಕುಡಿದು, ನಕ್ಷತ್ರಗಳ ಮುಡಿದು ಮೋಡ-ಕುಡಿ ಮಿಂಚುಗಳ ಧಾರೆ ಹಿಡಿದು ನದಿನದಿಗೆ ಧುಮುಕಿಸಿದ ಆ ಹಿಮಾದ್ರಿಯ ಶಿಖರ ನೆಲಕೊರಗಿ ನಿದ್ರಿಸಿತು; ಏಳ್ವುದೆಂದು? ಯಾರು ಬಂದರು ತೆರೆವ ಬಾಗಿಲವು, ಸೋತವರ- ನೆತ್ತಿಕೊಳ್ಳುವ ಹೆಗಲು, ತುಂಬಿದುಡಿಯು; […]

ಭೂಮಿ-ತೂಕ

ಮಾತು-ಬೆಳ್ಳಿ, ಕತ್ತಲೆಯ ತಳ್ಳಿ ಸುತ್ತೆಲ್ಲ ಮಿನುಗುತಿರಲು ಮೌನ-ಧ್ಯಾನ ಬಂಗಾರ ಕೃತಿಯು ಮೂಡಲಕೆ ಮೂಡಿ ಬರಲು ಜಗದ ಅಂಗಳವ ದಾಟಿ ಒಳಗೆ ಭಾರತದ ಗರ್‍ಭಗುಡಿಗೆ ಸೂರ್‍ಯಕಿರಣ ಶಿವಲಿಂಗ ತಾಗೆ ಹೂವಾಗಿ ಎಲ್ಲರೆದಗೆ. ಹೊರಗೆ ಬರಲಿ ಬಂಗಾರ […]

ಇಂದೆ ಸೀಮೋಲ್ಲಂಘನ

ಯುದ್ಧ ಬಂದಿತು ಸಿದ್ಧರಾಗಿರಿ ಇಂದೆ ಸೀಮೋಲ್ಲಂಘನ! ಪೂರ್‍ವ-ಪಶ್ಚಿಮ, ದಕ್ಷಿಣೋತ್ತರ ನೀಡಿ ಹಸ್ತಾಂದೋಲನ. ‘ಮಾಡು ಇಲ್ಲವೆ ಮಡಿಯಿರೆ’ನ್ನುತ ಎಂತು ಬಿಡುಗಡೆ ಪಡೆದೆವು- ನಾಡ ಕಟ್ಟುತ ಬೆವರು ಹರಿಯಿಸಿ ದೂರ ಗುರಿಯೆಡೆ ನಡೆದೆವು. ಬಂತು ಉತ್ತರದಿಂದ ಹತ್ತಿರ […]

ರಾಷ್ಟ್ರದ ಕರೆ

ಹಸುರಿನ ಹೂವಿನ ಹೊದರಿನ ಒಳಗೆ ಬುಸುಗಟ್ಟಿದೆ ಘನ ಘಟಸರ್‍ಪ, ನುಸುಳುತ ಕಾಲಿನ ಕೆಳಗೇ ಬಂದಿದೆ ಹಿಮಗಿರಿ ಕೂಡವಿತು ದೀರ್‍ಘತಪ. ‘ಬರಿ ಮೈ ತಣ್ಣಗೆ, ಮನದಲಿ ಬಿಸಿ ಹಗೆ’ ಉಸಿರೋ ಮೋಸದ ಬೆಂಕಿ ಬಲೆ! ‘ಹೊಸನಾತೆ’ನ್ನುತ […]

ವಿಶ್ವಗಾನದ ಬೆಳಕು

೧ ಗಾಳಿ-ಬೆರಳುಗಳಿಂದ ಆ ಮಹಾಕಾಶವಿದೊ ಸೋಕುತಿದೆ ನೆಲದ ಮೈಯ- ಪುಟ್ಟ ಎದೆ ಜಗದಗಲ ಬಾಯ್ ಬಿಟ್ಟು ನೋಡುತಿದೆ ಆಕಾಶಕೊಡ್ಡಿ ಕೈಯ! ಜಗದ ಪಾತ್ರೆಯು ಮತ್ತೆ ತೆರವಾಗಿ ತುಂಬುತ್ತಿದೆ ವಿಶ್ವಗಾನದನಂತ ಸೆಲೆಗಳಿಂದ; ಗಿರಿ, ಕೊಳ್ಳ, ಕಾನುಗಳ […]

ಕೃಷ್ಣಾವತಾರ

ವಸುದೇವ-ದೇವಕಿಯರಂತರ್‍ಭಾವದಿ ಭಗವಜ್ಜ್ಯೋತಿಯು ಹೊತ್ತಿರಲು ಗಾಳಿಮಳೆಯು, ಕಾರ್‍ಗತ್ತಲು, ಕಾರಾಗೃಹವೇ ಬಾಗಿಲು ತೆರೆದಿರಲು, ತುಂಬಿದ ಯಮುನೆಯು ಇಂಬಾದಳು, ಬಾ, ‘ಅಂಬಾ’ ಎಂದಿತು ಗೋಕುಲವು ಶಂಖ, ಚಕ್ರ, ಗದೆ, ಪದ್ಮಧಾರಿ ಕೂಸಾಗಲು ಹರಿಯಿತು ವ್ಯಾಕುಲವು. ಬೆಣ್ಣೆ ಮೊಸರು ತಿಂದಣ್ಣೆವಾಲು […]

ಸಮಾಧಿ ದರ್‍ಶನ

ಆ ಕೋಣೆಯಿಂದ ಕೆಳಗಿಳಿದು ಬಂದು ಈ ಮೇಣೆಯಲ್ಲಿ ಕುಳಿತು ಎಲ್ಲ ವೀಣೆದನಿ ಹಿಂದೆ ಇರುವ ಓಂಕಾರದಲ್ಲಿ ಬೆರೆತು, ಸ್ವಪ್ರಕಾಶದಲಿ ಇರುಳ ಬೆಳಗಿ, ಬೆಳಗಿನಲಿ ಶಾಂತವಾಯ್ತು ನೂರು ಚಿಕ್ಕೆ ಚಂದ್ರಮರ ಪಕ್ಕದಲಿ ಚೊಕ್ಕ ಬೆಳ್ಳಿ ಬೆಳಕು. […]