ಆತನ ಕೈ ಬಟ್ಟಲು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಈ ಸಾವಿರ ನಾನು-ನಾವುಗಳ ಮಧ್ಯ ನನಗೆ ಗೊಂದಲ ನಿಜಕ್ಕೂ ನಾನ್ಯಾರು? ನನ್ನ ಪ್ರಲಾಪಕ್ಕೆ ಕಿವಿಕೊಡಬೇಡ, ಬಾಯಿಕಟ್ಟಲೂ ಬೇಡಿ ಸಂಪೂರ್‍ಣ ಹುಚ್ಚ ನಾನು, ದಾರಿಯಲ್ಲಿ ಗಾಜಿನ ಪಾತ್ರೆ […]

ನುಗ್ಗಿ ಬಂದಿತು ಎಲ್ಲ ಲೋಕದಾನಂದವದು

ನುಗ್ಗಿ ಬಂದಿತು ಎಲ್ಲ ಲೋಕದಾನಂದವದು ನನ್ನ ದೇಹದ ಗೇಹ ರಚನೆಗೆಂದು, ಮುದ್ದನಿಟ್ಟವು ಬಾನ ಬೆಳಕು ಬಿಟ್ಟೂ ಬಿಡದೆ ಅವಳು ಎಚ್ಚರಗೊಂಡು ಏಳುವರೆಗು. ತ್ವರೆಯಿಂದ ಬಂದ ಬೇಸಗೆ ತಂದ ಹೂವುಗಳು ಅವಳ ಉಸಿರಾಟದಲಿ ಉಸಿರಿಟ್ಟವು. ಹರಿವ […]

ಅವಳು ನನ್ನವಳಾಗಿ

ಆಕಾಶ-ಅಲ್ಲಿರುವ ಎಲ್ಲ ನಕ್ಷತ್ರಗಳು ಜಗವು-ಮುಗಿಯದ ಅದರ ಎಲ್ಲ ಸಂಪದವು ನನ್ನ ವಶವಾದರೂ ನಾನು ಇನ್ನಿಷ್ಟು ಬಯಸಬಹುದು; ಆದರೆ ನಾನು ಸಂತೃಪ್ತ, ನೆಲದ ಮೇಲಿನ ಸಣ್ಣ ಮೂಲೆ ಸಾಕು- ಅವಳು ನನ್ನವಳಾಗಿ ಮಾತ್ರ ದೊರೆಯಬೇಕು. (Lover’s […]

ಸ್ವರ

ಬಿಟ್ಟ ನಿಟ್ಟುಸಿರ ಸ್ವರ ಸಮ್ಮಿಳಿಸಿ ಸಂ ಯೋಜಿಸಿ ಮಿಡಿ ಮಿಡಿ ದು- ಹೂ ಹಾ ರ ತರಂಗ ಮೀಟುವ ಕೊಳಲೇ ನಿನ್ನ ದನಿಯೊಡಲ ಬೇರು ಬಿಟ್ಟಿರುವುದು ಇಲ್ಲೇ ಈ ನನ್ನ ಗಟ್ಟಿಗಂಟಲ ಒಳಪೆಟ್ಟಿಗೆಯಲ್ಲೇ ಆದರೆ […]

ಕವಿತೆಗೆ

ಕವಿತೆ! ಸುಲಲಿತ ಭಾವಸಂಪ್ರೀತೆ, ನನ್ನೆದೆಯಸುಪ್ತಸುಖದುಃಖ ವೀಣಾಕ್ವಣಿತ ಸಂಗೀತೆಚೈತ್ರಮುಖಿ ಕಣ್ಣನರಳಿಸು ವಿಮಲವಿಖ್ಯಾತೆ!ಏನಿದ್ದರೇನು ವಿಶ್ವಂಭರಿತೆ ನಿನ್ನುದಯಚಿರನೂತನೋತ್ಸಾಹ ಚೇತನಂ ಪಡೆವನಕಕವಿಮನವು ಬರಿಯುದಾಸೀನ ರಸಹೀನತೆಯದೀನತೆಯ ತವರು; ಅದೂ ವಿಶ್ವಮೋಹಿನಿ ಉಷೆಯಚುಂಬನುತ್ಕರ್ಷತೆಗೆ ಭೂಮಿಗಿಳಿದಿದೆ ನಾಕ!ಅವುದೋ ಮೂಲೆಯಲಿ ಕುಳಿತು ಭೂರಂಗದಲಿನಡೆವ ಅಕಟೋವಿಕಟ ನಾಟಕದ […]

ನಾನು-ಅವನು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನಾನು ಧಣಿಗಳ ಬಗ್ಗೆ ಹೇಳಿದೆನೆ? ಆತ ಧಣಿಗಳ ದೊರೆ ಹೃದಯದಲ್ಲಿ ಹುಡುಕಾಡಿದೆನೆ? ಅಲ್ಲಿ ನಲ್ಲನ ಕರೆ ಶಾಂತಿಗಾಗಿ ಹಂಬಲಿಸಿದೆನೆ? ಆತ ಶಾಂತಿದೂತ ಯುದ್ಧಭೂಮಿಗೆ ಬಂದೆನೆ? ಆತನೇ […]

ಹಾಡಿನೊಡತಿ

೧ ಸವಿಹಾಡ ರಸವತಿಯೆ ಎದೆಯನ್ನೆ ಕನ್ನೆ, ನಿನ್ನೆದೆಯ ಬೀಣೆಯನು ನುಡಿಸು ಚೆನ್ನೆ! ನುಡಿದು ಪಡಿನುಡಿದು ಎದೆವನೆದೆರೆದು ನುಡಿಯೆ. ೨ ಜೀವಸಂಜೀವಿನಿಯೆ ಕಲ್ಪನಾಮೋದೆ, ಹೋಗಾಡಲೀರೋತೆ ಹಾಡು ಪ್ರಮದೆ ಅಂಬರವ ತುಂಬಿ ತುಳುಕಿಸಿ ಗಾನ ಸುರಿಯೆ! ೩ […]

ಮುದ್ದಣ-ಮನೋರಮೆ

ಮುದ್ದಣ ಮನೋರಮೆಯರಿನಿವಾತನಾಲಿಸಲು ಕನ್ನಡದ ಬೆಳ್ನುಡಿಯ ಹೊಂಬೆಳಗಿನುನ್ನತಿಯ ಕಾಣಲೆಂದಾಸೆಯಿರೆ ಜೇನುಂಡ ಆರಡಿಯ ಝೇಂಕೃತಿಗೆ ಕಿವಿದೆರೆದು ಕೇಳು ಎದೆತಣಿಯುವೊಲು. ತನಿವಣ್ಣ ತಿನಲಿತ್ತು ಕೆನೆವಾಲನೀಯುವರು. ಏನು ಜೊತೆ! ಎಂಥ ಕಥೆ! ನಾಲ್ಮೊಗನ ಅಗ್ಗಿಟ್ಟಿ- ಯೊಗೆದ ಮುತ್ತಿನ ಚೆಂಡು! ಮಾತೊಂದು […]