ವೈಖರಿ

ಮಣ್ಣಿನ ಮಗನ ಆಡಳಿತ ಬಲು ಭರ್‍ಜರಿ, ನಾಡಿನ ಇತಿಹಾಸದಲ್ಲೆ ಗೋಲ್ಡನ್ ಛಾಪ್ಟರ್; ಚಿರ ವಿನೂತನ ರೈತರ ಉದ್ಧಾರದ ವೈಖರಿ; ಪ್ರತಿ ನಿತ್ಯ ಏರಿ ಕಾಂಟೆಸ, ವಿಮಾನ, ಹೆಲಿಕಾಪ್ಟರ್. *****

ಅಂತೂ ಕೊನೆಗೆ ಬಂತು ಮಳೆ

ಅಂತೂ ಕೊನೆಗೆ ಬಂತು ಮಳೆ- ತಂತಿ ವಾದ್ಯವ ನುಡಿಸು, ಮದ್ದಳೆಯ ಬಡಿ, ಹೂಡಿ ಕೇಕೆ. ಓಡಿ ಹೋಗುವ ಮೋಡಗಳ ಹಿಡಿದು ಹಿಂಡು. ಬಳುಕಿ ಬಾಗುವ ಮಳೆಯ ಸೆಳಕುಗಳ ಸೇವಿಗೆಯ ಸಿವುಡು ಕಟ್ಟಿಡು; ಬೇಕು ಬೇಕಾದಾಗ […]

ಮಾನಭಂಗ

ಬೆಳಕಿನ ನೂಲುಗಳ ಥರ ಥರ ಬಣ್ಣದಲದ್ದಿ ನೇಯುತ್ತಿದ್ದ ಸೂರ್‍ಯ ನಿನಗೊಂದು ಸೀರೆ ಭೂಮೀ ನಿನ್ನ ಮೇಲೇ ಹಠಾತ್ತನೆ ರಾತ್ರಿ ಬಂದು ಹರಿದೊಗೆಯಿತದನ್ನ ನಿರತ ಸೂರ್‍ಯನನ್ನೊದ್ದು ಕಡಲಿನೊಳಗೆ ಅವ ಬಣ್ಣ ತುಂಬಿದ ಕೈಲಿ ನೀರ ಬಡಿಬಡಿದು […]

ನೀರು ಹರಿದಿದೆ ನಿರಾತಂಕ

ಆಗಸದ ಆಣೆಕಟ್ಟನು ಒಡೆದು ನುಗ್ಗಿದವು ನೂರು ನಾಯ್ಗರಾ ತಡಸಲು! ಕಣ್ಣು ಕಟ್ಟಿ, ಗಿಮಿಗಿಮಿ ಗಾಣವಾಡಿಸಿತು ಗಾಳಿ ನೆನೆ ನೆನೆದು ನೆಲವೆ ಕುಪ್ಪರಿಸಿತ್ತು, ಮುಗಿಲು ಹೊಚ್ಚಿತು ಕಪ್ಪು ಕಂಬಳಿಯ ಕತ್ತಲು, ರಮ್….ರಮ್….ರಮ್…. ರಣ ಹಲಗೆ ಸದ್ದಿನಲಿ […]

ಆಗಿನ್ನೂ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಆಗಿನ್ನೂ ಚರಾಚರಗಳು ರೂಪುಗೊಂಡಿರಲಿಲ್ಲ ವಿಶ್ವವಲ್ಲಿರಲಿಲ್ಲ, ಬ್ರಹ್ಮಾಂಡವಿರಲಿಲ್ಲ ಆಡಂ ಅಲ್ಲಿರಲಿಲ್ಲ, ನಾನೇ ಆಗ ಬಯಲು-ಸಮಾಧಿ ನಾನೇ ಆಗ ಅನಂತದ ಸಂಕೇತ ವಿಶ್ವಕ್ಕೆ ಬೆಳಕು ಬಂದಿದ್ದು ನನ್ನಿಂದ ಆಡಂ […]

ಧಾರವಾಡದಲ್ಲಿ ಮಳೆಗಾಲ

ಏನಿದೀ ಹನಿಹನಿಯ ತೆನೆತೆನೆ ಸಿವುಡುಗಟ್ಟುತ ಒಗೆವುದು! ಗುಡ್ಡ ಗುಡ್ಡಕೆ ಗೂಡು ಬಡಿಯುತ ಬೇರೆ ಸುಗ್ಗಿಯ ಬಗೆವುದು. ಸೆಳಸೆಳಕು ಬೆಳೆ ಕೊಯಿದರೂ ಆ ಮೋಡದೊಕ್ಕಲು ತಂಗದು ಬಾನ ಮೇಟಿಗೆ ಸೋನೆ ತೂರುತ ರಾಶಿಮಾಡದೆ ಹಿಂಗದು. ಏನು […]

ಗಗನದಿ ಸಾಗಿವೆ

ಗಗನದಿ ಸಾಗಿವೆ, ಬಾಗಿವೆ ಮೋಡ ಹೋಗಿವೆ ನೀರನು ಸುರಿದು; ಬರುವವು, ಬಂದೇ ಬರುವವು ನೋಡ ತುಂಬಿಸಿ ತುಳುಕಿಸಿ ಹರಿದು. ಇಳೆಗೂ ಬಾನಿಗು ಮಳೆ ಜೋಕಾಲಿ- ತೂಗಿದೆ, ತಂಗಿದೆ ಚೆಲುವು; ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ […]

ನನ್ನ ನೆನಪು

ಎಲ್ಲ ಕಡೆ ಬಸ್ಸು ತಪ್ಪಿ ಭಾರದ ಕೈ ನೋಯುವ ಬ್ಯಾಗಿನೊಂದಿಗೆ ಧೂಳು ಮುಕ್ಕುವ ಸಂಜೆ ದಣಿದು ನಿಂತಾಗ ಅಕ್ಕ ಪಕ್ಕ ಸರಿಯುವ ಮಲ್ಲಿಗೆ ಮುಡಿದ ತುರುಬಿನ ಕಣ್ಣುಗಳಲ್ಲಿ ಅಮೃತವೀಯುವ ಹೆಂಗಸರನ್ನು ಕಂಡು ಅಮ್ಮನ ನೆನಪಾಯಿತು […]

ಚಿಗುರಿತು ಈ ಹುಲುಗಲ

ಚಿಗುರಿತು ಈ ಹುಲುಗಲ- ಶಿವ-ಪಾರ್‍ವತಿ ಅಪ್ಪಿದಂತೆ, ಹೊಸ ಸೃಷ್ಟಿಗೆ ಒಪ್ಪಿದಂತೆ, ಚಿಗುರಿತು ಈ ಹುಲುಗಲ! ಯಾ ವಿಮಾನದಿಂದ ಬಂದು ಇಳಿದನೇನೊ ಚೈತ್ರ ಬೇರಿನಿಂದ ತುದಿಯವರೆಗು ಮೂಕ ತಂತಿ ಮಿಡಿತ. ಒಂದು ಇರುಳು, ಒಂದು ಬೆಳಗು, […]