ಎತ್ತು ಮೇಲಕೆನ್ನನು

೧ ಕಾಸಾರದ ಕೆಸರಿನಿಂದ ಪಾಚಿ ಜೊಂಡು ನೀರಿನಿಂದ ವಿಮಲ ಕಮಲ ಮೇಲಕ್ಕೆದ್ದು ಕೊಳದ ಎದೆಯನಮರಿ ಗೆದ್ದು ದಲ ದಲ ದಲವರಳುವಂತೆ ಥಳ ಥಳ ಥಳ ತೊಳಗುವಂತೆ ಎತ್ತು ಮೇಲಕನ್ನನು ಜೀವಪಥದಿ ಪತಿತನು. ೨ ಮುಳ್ಳು […]

ಈ ಘಟಪ್ರವಾಹ

ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ- ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು ನಿಲುಗಡೆಯ ತಿರುಗಣಿಯಲುರುಳಿ […]

ವ್ಯಾಲಂಟನ್ ದಿನಕ್ಕಾಗಿ ಒಂದು ಪದ್ಯ

ಭಗವತಿ ಇಸ್ತಾರುಸಕಲ ಸೃಷ್ಠಿಯ ಮಾತೃದೇವತೆಸಮರದ ದೇವತೆ, ಕಾಮದ ದೇವತೆ. ಜಗಭಂಡೆ.ಸಮಚಿತ್ತದಲ್ಲಿ ತೊಡೆಗಳನ್ನು ಅಗಲಿಸಿ ಎತ್ತಿಯೋನಿದರ್ಶನ ಮಾಡಿಸುವ ನಮ್ಮ ಲಜ್ಜಾದೇವಿಯೂ ಇವಳೊ? ಹುಲುಮಾನವರಾದ ಇತಿಹಾಸಕಾರರು ಇಡುವ ಲೆಕ್ಕದ ಪ್ರಕಾರಐದು ಸಾವಿರ ವರ್ಷಗಳಿಂದ ನಮ್ಮನ್ನು ಆಳುವ ಈ […]

ಮತಂಗ ಪರ್ವತದಲ್ಲೊಂದು ಸುರಂಗ

ಇಲ್ಲಿ! ಎರಡು ಬಂಡೆಗಳ ಬಿರುಕಲ್ಲಿ ನುಸುಳಿದರೆ ಮೆಲ್ಲಗೆ…. ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು ತನ್ನೊಳಗೆ ಅವಿಸಿಕೊಂಡು ಹನಿ ಹನಿ ಹುಲ್ಲು ಹುಲ್ಲೆ ಜೀವ ಜಂತುಗಳ ವಾಸನೆಯ ಆಘ್ರಾಣ ತೆರೆಯ ಬಿಟ್ಟರೆ ಕಣ್ಣಿಗೆ ಕತ್ತಲ ಮೈದಡವುತ್ತಾ […]

ಬಾಳಿನ ಬೀಳಿದು….

ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […]

ಸಹವಾಸ ಮಹಿಮೆ

ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****

ನನಸಿನ ಕನಸು

ಹೋದೆ ಹೋದೆನು ದೂರ ನಡೆದೆನು ಕನಸು ಕೈಹಿಡಿದಾಚೆಗೆ, ಊರಿನಾಚೆಗೆ ಗಿರಿಯ ಶೃಂಗಕೆ ಚೆಲುವು ಚಿಮ್ಮುವ ಕಾಡಿಗೆ; ಕಾಡಗಿಡಗಳು ಮುಗಿಲ ಮುತ್ತಿಡೆ ಈರ್ಷೆ ತೋರಿಸುವಲ್ಲಿಗೆ, ಹಚ್ಚ ಹಸುರಿನ ಪಚ್ಚ ಪಯಿರಿನ ನಿಚ್ಚಸುಂದರ ಬೀಡಿಗೆ ಏರಿ ಗಿರಿಯನು, […]