ಒಂದೆ ಉಸಿರಿಗೆ ಹಸಿರ ಹೊಮ್ಮಿಸುವ; ನೂರು ಬಗೆ ಭಾವ ಕುಸುಮವನೆತ್ತಿ ಗಾಳಿಸುಳಿಯಲಿ ಹೀಗೆ ನರುಗಂಪ ತೇಲಿಸುವ; ಹಂಬಲದ ಸವಿದನಿಗೆ ತುಂಬಿ ಆಲಿಸುವ; ಮನಸಿನ ಮಧ್ಯಬಿಂದುವಿಗೆ ಕನಸು-ಕಾಮನಬಿಲ್ಲು ವರ್‍ತುಳವ ರಚಿಸಿ, ನೆಲ- ಮುಗಿಲನೊಂದು ಸಲ ಬಂಧಿಸಿ […]
ವರ್ಗ: ಪದ್ಯ
ವಿದ್ಯಾಭವನದ ಗೋಪುರದಿಂದ
ಅತ್ತ ಬೆಳುವೊಲ, ಇತ್ತ ಮಲೆನಾಡ ಜರಿ ಸೆರಗು. ಸುತ್ತು ಪರ್‍ವತ ನೀಲಿ. ಗುಡ್ಡ ಕೊಳ್ಳವ ಇಳಿದು- ಏರಿ ಚಿಗುರಿದ ಹಸಿರು. ಕೆಲದಿ ಕನ್ನಡಿ ಹಿಡಿದು ನಿಂತ ಕೆಲಗೇರಿ ಕೆರೆ. ಗೆರೆ ಕೊರೆದು ಬರುವ ಜುಗು- […]
ರಕ್ತ ಹಾಲಾಗುವುದಕ್ಕೆ ಕಾಲ ಬೇಕು
‘ಮಸ್ನವಿ’ ರಚನೆ ಮುಗಿಯಲು ಒಂದು ಋತುವಿನಷ್ಟು ತಡವಾಯಿತು ರಕ್ತ ಹಾಲಾಗುವುದಕ್ಕೂ ಕಾಲ ಬೇಕು ನಿನ್ನ ಕೃಪೆ ಆಗ ತಾನೆ ಹುಟ್ಟಿದ ಕೂಸಿನ ಹಾಗೆ ಬರುವತನಕ ರಕ್ತ ಹಾಲಾಗದೆ ಕಾಯಬೇಕು ವಸಂತ ಬರದೆ ಮೊಗ್ಗುಗಳು ಅರಳುವುದಿಲ್ಲ […]
ಅರುವತ್ತರೈಸಿರಿ
ಎತ್ತರದ ನಿಲವು; ಮನದಲಿ ನೂರು ನಕ್ಷತ್ರ- ಗಳ ವಿಲಕ್ಷಣ ಹೊಳವು. ವಿಸ್ತಾರದನುಭವದ ಸ್ವಸ್ತಿ ಬಿತ್ತರದ ಹಣೆ; ಸುಸ್ಥಿರನೋಟ ಬಲಿದ ಯೋಧೃವಾಣಿಯ ನಿಷ್ಠೆ. ಕೃತಿ ಮಹೋನ್ನತ ಪಾತ್ರ. ದೊಡ್ಡ ಮಳೆ ಜಡಿದು, ನೆಲವೆಲ್ಲ ನೀರನು ಕುಡಿದು, […]
ಇಷ್ಟು ಇಷ್ಟೆಂದೇಕೆ?
ಇಷ್ಟು ಇಷ್ಟೆಂದೇಕೆ ಕಟ್ಟೆ ಕಟ್ಟುವೆ ಮರೀ ಇದ್ದದ್ದು ಅರಿಯುವಾ ಜತೆಗೆ ಇಲ್ಲದ್ದೂ ಸರಿ ನೀನು ಇಷ್ಟೆಂದದ್ದು ಅವನಿಗಷ್ಟಾದೀತು ನಿನಗೆ ಇಶ್ಶಿಯಾದ್ದವಗೆ ಇಷ್ಟ ನಿನ್ನ ಕಣ್ಣಿನ ಸೂಜಿ ತುದಿಯಷ್ಟು ತೂತೊಳಗೆ ಜಗ ಹೊಕ್ಕು ಬರುವದು ಬಹಳೇ […]
ಕಲ್ಕತ್ತೆಯಲಿ ಕಾಳಿ
ಕಲ್ಕತ್ತೆಯಲ್ಲಿ ಕಾಳಿ ಬಲಿಗೆ ಬಂದಳು ಮೊನ್ನೆ; ನರಪಶುವು ನರಪಶುವ ಕೊಂದು ಕುಣಿಯಿತು ಕೇಕೆ ಆಕಿ; ನಲಿಯಿತು ತಿವಿದು ಹೊಡೆದಪ್ಪಳಿಸಿ ಸುಟ್ಟು ಉಲಿದು ಸಾಯಿಸಿ ಕೂಸುಕುನ್ನಿಗಳ, ಹೆಣ್ಣುಗಳ, ಅಂಡುಗಳ, ದುರ್ಬಲರ, ದೀನರ, ಅನಾಥರನು. ಪಶುವ ಹೆಣ […]
