ಚೆಂಗುಲಾಬಿಯ ಮೊಗ್ಗೆ ಅರುಣನೆಡೆ ಮೊಗವಿರಿಸಿ ಚೆಂದುಟಿಯನರೆತೆರೆದು ನೋಂಪಿಯಲ್ಲಿ- ಸಕ್ಕರೆಯ ನಿದ್ದೆಯಲಿ ಸವಿಗನಸ ಕಾಣುತಿದೆ ಚದುರನೈತಹನೆಂಬ ಹಂಬಲದಲಿ! ನವುರಾದ ಪಕಳೆಯಲಿ ಕುಂಕುಮ ಪರಾಗವಿದೆ ಎದೆಯಲ್ಲಿ ಸೌರಭದ ಸೂಸುಗಿಂಡಿ, ಮೈತುಂಬ ಒಳುಗುಂದದಮಲ ಸುರುಚಿರ ಕಾಂತಿ ಚೆನ್ನೆಯರ ಕೆನ್ನೆಗಳ […]
ವರ್ಗ: ಕವನ
ಕೋಳಿ ಕೂಗುವ ಮುನ್ನ
ರಕ್ತ ಕುಡಿಯುವ ಪಾತರಗಿತ್ತಿಗಳು ಹಣ್ಣಾಗಿ ತೊಳೆ ತೊಳೆ ಚಿಗುರಿ ಬೆವರುತ್ತಲೇ ಧಗೆಯುಂಡು ಧಾವಿಸುವ ಬಣ್ಣಗಳು ಕಣ್ಣು ತುಂಬ. ಒಂದರ ಮೇಲೊಂದು ಧಬ ಧಬ ಬಿದ್ದ ಹಾಡಿಸುವ ತಂತು-ಮೋಹಿಸುವ ವೈವಾಟು ಕಾಲು ಕೈ ಹಿಂಡಿ ನೂಲೆಳೆವ […]
ಬಸವನಾಳರಿಗೆ ಬಾಷ್ಪಾಂಜಲಿ
ಸಂಜೆಯಾಯಿತು; ಬಾನಬಾಳಿಗೆ ಮಂಜು ಕವಿಯಿತು ಒಮ್ಮೆಲೆ! ಕಣ್ಣುಮುಚ್ಚುತ ತಣ್ಣಗಾದನು ರವಿಯು; ಬಳಸಿತು ಕತ್ತಲೆ. ಚಿಲ್ಲನೆಯ ಚಳಿಗಾಳಿ ಕೊರೆಯಿತು ನಂಜಿನಂತಹ ವಾರ್‍ತೆಯ; ಕನ್ನಡದ ಜೇಂಗೊಡವ ಕದ್ದರು ಸುರರು, – ನಾಡಿನ ಬುತ್ತಿಯ. “ಇಲ್ಲವಾದರೆ ಇನ್ನು?” ಎಂಬ […]
ಸಾವ ಗೆದ್ದಿಹ ಬದುಕು
ತುಂಬಿ ಹರಿಯುವ ಹೊಳೆಗೆ ತುಂಬಿ ಬಂದಿತು ಗಳಿಗೆ! ಗಿರಿಯ ಗಂಭೀರತೆಯ ಹೀರಿ ನೆರೆ ನಾಡುಗಳ ಕಾಡುಗಳನಲೆದು ತತ್ವಾಮೃತದ ಶಾಖೆಗಳ ಕೊಂಡು ಸಾಗಿತು ಶಾಂತಿ ಜ್ಞಾನ ಸಿಂಧುವಿನಡೆಗೆ. ಮೆಲುನಗೆಯ ಕಲಕಲ ನಿನಾದದಲಿ ಬಗೆ ತಣಿಸಿ ನಿರ್‍ಮಲೋದಕದಾಳಕಿಳಿದು […]
ಶ್ರೀ ಅರವಿಂದ ಮಹರ್‍ಷಿ
ಓಂ! ತಮೋಹಾರಿ ಜ್ಯೋತಿರ್‍ಮೂರ್‍ತಿ ಚಿಚ್ಛಕ್ತಿ ಚಿತ್ತಪಶ್ಶಕ್ತಿಯಿಂ ಯೋಗಸಾಧನೆಗೈದ ಅಧ್ಯಾತ್ಮದುನ್ನತಿಯನಂತರಾಳದಿ ಪಡೆದ ಪರಮ ಭಗವನ್ಮುಕ್ತ, ಲೋಕತಾರಕ ಶಕ್ತಿ! ಜೀವನ ಸರೋವರದಿ ದೈವತ್ವದರವಿಂದ- ವರಳಿಸಿದ ದಿವ್ಯ ಜೀವನದಮರ ದಾರ್‍ಶನಿಕ ಸರ್‍ವಾರ್‍ಪಣಂ ಬಲಿದ ಸಿದ್ಧಿ ಅತಿಮಾನಸಿಕ ಪೂರ್‍ಣ ತೇಜೋವೃದ್ಧಿ; […]
