ಅಡ್ಡ ವೈಸು

“ಗೀತಾ, ಮನೆ ಮುಗೀತಾ? ಯಾವಾಗ ಗೃಹಪ್ರವೇಶ?” “ಮುಗೀತೂರಿ, ಆದ್ರೆ ಕಂಟ್ರಾಕ್ಟರ್ ಮಾಡ್ದ ಸಖತ್ ಮೋಸ”. “ಯಾಕೆ? ಏನಾಯ್ತು ಅಂಥದ್ದು? ಪೀಕಿಸಿದ್ನ ದುಡ್ಡು ಜಾಸ್ತಿ?” “ಅವನ ಮನೆ ಹಾಳಾಗ, ಕರಗಿಸಿಬಿಟ್ಟ ಕಣ್ರಿ ಇದ್ದ ಬದ್ದ ಆಸ್ತಿ”. […]

ಜೀವರಸಾಯನಶಾಸ್ತ್ರ

ಜೀವರಸಾಯನಶಾಸ್ತ್ರವನ್ನು ನಾನೀಗ ಅಭ್ಯಸಿಸುತ್ತಿದ್ದೇನೆ….. ಜೀವರಸಾಯನಶಾಸ್ತ್ರಕ್ಕೆ ಜೀವವಿಲ್ಲ ಭವಿಷ್ಯದ ಹೊಳಹು ಮತ್ತೆ ಅವಶೇಷದ ಅರಿವು ಹೀಗೆ ಯಾವ ಅವಿರ್‍ಭಾವವೂ ಇಲ್ಲ ಇದಕ್ಕೆ ಪುರಸೊತ್ತಿಲ್ಲದೆ ಮರೆಯಲ್ಲಿದ್ದುದನ್ನ ಸರಸರ ತೆರೆಯಮೇಲೆ ತಂದುಬಿಟ್ಟು ಹೋಗುವದೊಂದೇ ಗೊತ್ತು. ಪ್ರಯೋಗಕ್ಕೆ ಸಿಕ್ಕಿ ನರಳಿ […]

ವೈಖರಿ

ಮಣ್ಣಿನ ಮಗನ ಆಡಳಿತ ಬಲು ಭರ್‍ಜರಿ, ನಾಡಿನ ಇತಿಹಾಸದಲ್ಲೆ ಗೋಲ್ಡನ್ ಛಾಪ್ಟರ್; ಚಿರ ವಿನೂತನ ರೈತರ ಉದ್ಧಾರದ ವೈಖರಿ; ಪ್ರತಿ ನಿತ್ಯ ಏರಿ ಕಾಂಟೆಸ, ವಿಮಾನ, ಹೆಲಿಕಾಪ್ಟರ್. *****

ಮಾನಭಂಗ

ಬೆಳಕಿನ ನೂಲುಗಳ ಥರ ಥರ ಬಣ್ಣದಲದ್ದಿ ನೇಯುತ್ತಿದ್ದ ಸೂರ್‍ಯ ನಿನಗೊಂದು ಸೀರೆ ಭೂಮೀ ನಿನ್ನ ಮೇಲೇ ಹಠಾತ್ತನೆ ರಾತ್ರಿ ಬಂದು ಹರಿದೊಗೆಯಿತದನ್ನ ನಿರತ ಸೂರ್‍ಯನನ್ನೊದ್ದು ಕಡಲಿನೊಳಗೆ ಅವ ಬಣ್ಣ ತುಂಬಿದ ಕೈಲಿ ನೀರ ಬಡಿಬಡಿದು […]

ನನ್ನ ನೆನಪು

ಎಲ್ಲ ಕಡೆ ಬಸ್ಸು ತಪ್ಪಿ ಭಾರದ ಕೈ ನೋಯುವ ಬ್ಯಾಗಿನೊಂದಿಗೆ ಧೂಳು ಮುಕ್ಕುವ ಸಂಜೆ ದಣಿದು ನಿಂತಾಗ ಅಕ್ಕ ಪಕ್ಕ ಸರಿಯುವ ಮಲ್ಲಿಗೆ ಮುಡಿದ ತುರುಬಿನ ಕಣ್ಣುಗಳಲ್ಲಿ ಅಮೃತವೀಯುವ ಹೆಂಗಸರನ್ನು ಕಂಡು ಅಮ್ಮನ ನೆನಪಾಯಿತು […]

ಹುಲಿ-ಇಲಿ

ಕಛೇರಿಯಲ್ಲಿ ಏನಿವನ ದರ್ಪ! ಸದಾ ಬುಸ್ಸೆನ್ನುವ ಕಾಳಿಂಗ ಸರ್ಪ; ಬಾಯಿ ತೆರೆದನೋ ಬೈಗುಳ, ಉಗಿತ; ಗಂಟು ಮುಸುಡಿಯ ರಕ್ತಾಕ್ಷಿ; ಮನೆಯಲಿ ಉಡುಗಿ ಜಂಘಾಬಲವೇ ಮಡದಿಯ ಕೈಯಲಿ ಊದುಗೊಳವೆ, ಅವಳೆದುರಾದರೆ ಗಂಡತಿಯಾಗುತ ಹಲ್ಕಿರಿಯುವ ಸೀಡ್‌ಲೆಸ್‌ ದ್ರಾಕ್ಷಿ. […]

ಮುದ್ದು ಮಕ್ಕಳಿಗೊಂದು ಕವಿತೆ

ನೀಟಾಗಿ ಪುಟು ಪುಟು ಎಳೆ ಕ್ರಾಪು ಬಾಚಿ ಪೌಡರು ಘಮ ಘಮಿಸುವ ಪುಟಾಣಿ ಮಕ್ಕಳೇ ಖುಷಿಯಾಗುತ್ತದೆ ನಿಮ್ಮ ಕಂಡು -ನಿಮ್ಮ ಹಾಗೆಯೇ ನಾನೂ ಇದ್ದೆನಲ್ಲಾ ತಕ್ಷಣ ನೋಯ್ದು ಕಹಿಯಾಗುತ್ತದೆ ಮನ -ನನ್ನ ಹಾಗೆಯೇ ಮುಂದೆ […]

ವಿಧೇಯ ಪುತ್ರ

“ನಾವು ಬದುಕಿರೋವಾಗ್ಲೇ ಹೀಗೆ, ಗೊಟಕ್ಕಂದ್ರೆ ಹೇಗೋ ಏನೋ, ಇನ್ನು ನಮ್ಮನ್ನ ಜ್ಞಾಪ್ಕಾ ಇಡ್ತಾನ?” _ಮನಸಾರೆ ನೊಂದು ಆಡಿಕೊಂಡಿರಲು ಮುದಿ ತಾಯಿ ತಂದೆ ಅಮಾವ್ರಗಂಡ ಬಿರುದಿನ ಮಗನನ್ನ; ಸುಪುತ್ರ ಸಮಾಧಾನಿಸಿದ: “ಯಾಕೆ ಪಡ್ತೀರಿ ಅನುಮಾನ? ನಂಬಿಕೆ […]

ಏತನ್ಮಧ್ಯೆ

ನುಗ್ಗೇಕಾಯಿ ಸಾಂಬಾರಿನ ಪರಿಮಳದ ಓಣಿಗಳಲ್ಲಿ ದಾರಿ ಬದಿ ಮನೆ ಮನೆಯಂಗಳದಿ ತುಳಸೀಕಟ್ಟೆಗೆ ಸುತ್ತು ಹಾಕುವ ಹಳದೀ ಮುತ್ತೈದೆಯರು ಅಂಗಡಿ ಗಲ್ಲಾಗಳಲ್ಲಿ ದಿಂಬು ಕೂತ ಮೂರು ನಾಲ್ಕು ಲಾರಿಗಳುಳ್ಳ ಅವರ ದೊಗಳೆ ಗಂಡಂದಿರು ಊರ ಹೊರಗೆ […]