ರಂಗದಿಂದೊಂದಿಷ್ಟು ದೂರ

ನಿನ್ನೆವರೆಗೆ ಜಯಭೇರಿ ಹೊಡೆದ ನಾ -ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು ಇನ್ನೇನುಂಟು? ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ ತೋಡಿದ ತಗ್ಗಿನಲ್ಲಿ ಒಣಗಿದ ಖುರ್‍ಚಿ ಹಾಕಿಸಿಕೊಂಡು ಒಬ್ಬಂಟಿ ಅಲ್ಲಲ್ಲಿ […]

ಚಕ್ರವ್ಯೂಹ

ಯುನಿವರ್‍ಸಿಟಿಯ ಸುತ್ತಾ ಜಿಟಿ ಜಿಟಿ ಮಳೆಯಲ್ಲಿ ಕಳಚದ ಪೊರೆಯಲ್ಲಿ ಗಾಳಿಮರಗಳ ಕಾಲಿಗೆ ಬಿದ್ದ ಅಂಗಾತ ಬೀದಿಗಳಲ್ಲಿ ಕಟ್ಟಡದಿಂದ ಕಟ್ಟಡಕ್ಕೆ ಹಾಯುವ ಗಂಭೀರತೆಯಲ್ಲಿ ಹಿರಿಯರ ಮುಖದರ್‍ಜೆಯಲ್ಲಿ ಸುಂಯನೆ ಸೆರಗು ಚಿಮ್ಮಿಸಿ ಹೊರಟ ಸ್ಕೂಟರಿನಲ್ಲಿ ಸಿಟಿಬಸ್ಸಿಗೆ ಜೋತು […]

ಸೂರ್ಯ

ಸೂರ್ಯ ಆಗಾಗ ಹಗಲುಗಳ ನುಂಗಿ ಸುಖವಾಗಿ ಸಾಯುತ್ತಿದ್ದ ಅಥವಾ ಬದುಕುತ್ತಿದ್ದ ಆಗೊಮ್ಮೆ ಈಗೊಮ್ಮೆ ಹೆಣ್ಣುಗಳ ತುಟಿಯಲ್ಲಿ ಪಿಸುನುಸುಳುತ್ತಿದ್ದ ಅಯ್ಯೋ ಗದ್ದಲ ಭೂಮಿಯ ತುಂಬ ಮಕ್ಕಳೋ ಮಕ್ಕಳು! *****

ಅನುಭವ ಇಲ್ಲದ ಕವಿತೆ

ಅನುಭವ ಇಲ್ಲದ ಕವಿತೆ ತಿಂಗಳು ತುಂಬದ ಕೂಸು ಅವಸರವಸರದಿಂದ ಉಸಿರಿಗಾಗಿ ವಿಲಿವಿಲಿಸುತ್ತ ಹೊರ ಬರುತ್ತದೆ ಬಿಸಿಲಿಗೆ ರಾತ್ರಿ ಅಂಗಡಿ ಮುಚ್ಚಿ ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ ತಪ್ಪಿ […]

ನಡತೆ

ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****

ತಿಳಿಯಲಿಲ್ಲ

ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […]