ಜನಕೆ ಪೂಜಿಸಲೆಂದು ನಿನ್ನ ಪ್ರತಿಮೆಯನೊಂದು ನನ್ನ ಜೀವನದಿಂದ ರೂಪುಗೊಳಿಸೆ, ನನ್ನ ಮಣ್ಣನು, ಮನೋರಥಗಳನ್ನು ಮತ್ತೆಲ್ಲ ಬಣ್ಣಗನಸನು ಭ್ರಾಂತಿಗಳನು ತಂದೆ. ನನ್ನ ಜೀವನದಿಂದ ನಿನ್ನೆದೆಯ ಮೂರ್ತಿಯನು ನಿನ್ನ ಪ್ರೀತಿಗೆ ರೂಪುಗೊಳಿಸೆನ್ನಲು, ಸಿದ್ಧಗೊಳಿಸಿದೆ ನಿನ್ನ ಅಗ್ನಿ, ಸತ್ಯತೆ, […]
ಲೇಖಕ: ಚನ್ನವೀರ ಕಣವಿ
ನೆರಳು-ಬೆಳಕು
ನಿನ್ನ ದೀಪವ ಬಾನಿನಲ್ಲಿ ನೀ ಹಿಡಿದಾಗ ಬೆಳಕು ಬೀಳುವುದೆನ್ನ ಮೊಗದ ಮೇಲೆ ಅದರ ನೆರಳಾಡುವದು ನಿನ್ನ ಮೇಲೆ. ನಿನ್ನ ಹೃದಯದಿ ನಾನು ಪ್ರೇಮ ದೀಪವ ಹಿಡಿಯೆ ಅದರ ಬೆಳಕಾಗುವದು ನಿನ್ನ ಮೇಲೆ ನಾನು ನಿಂತೆನು […]
ಮೋಡ ಉಸುರಿತು
ಮೋಡ ಉಸುರಿತು ನನಗೆ; “ನಾಶ ಹೊಂದುವೆನು”. ಇರುಳು ನುಡಿಯಿತು; “ನಾನು ಜಿಗಿವೆನರುಣೋದಯದ ಅಗ್ನಿ ಕುಂಡದೊಳು”. “ಅವನ ಹೆಜ್ಜೆಯ ಗುರುತಿನಂತೆ ಮೌನದಲಿರುವೆ” ಒಡನುಡಿಯಿತಿಂದು ನೋವು. ನನ್ನ ಬಾಳೆನೆಗೆ ಹೇಳಿತು: “ಮಾನವತೆಯಲ್ಲಿ ಕರಗುವನು” “ನನ್ನ ಬೆಳಕುಗಳೆಲ್ಲ ನಿನ್ನ […]
ಮೋಡಗಳು ನಾವು
ಬಾನು ತನ್ನನವರತ ನೀಲಿಮೆಯ ದಿಟ್ಟಿಸುತ ಕನಸುಗಳ ಕಾಣುತಿಹುದು; ಮೋಡಗಳು ನಾವದರ ವಿಪರೀತ ಹುಚ್ಚುಗಳು ನಮಗಿಲ್ಲ ಮನೆಯಾವುದೂ. ನಿತ್ಯತೆಯ ಮುಕುಟದಲಿ ನಕ್ಷತ್ರ ಹೊಳೆಯುತಿವೆ ಸ್ಥಿರ ಲಿಖಿತ ರೂಪವಿಹುದು; ನಮ್ಮದೋ ಬರಿ ಸೀಸಕಡ್ಡಿ ಬರೆದಂತಿಹುದು- ಮರು ಚಣದಿ […]
ಆರಿದ ಕುಲುಮೆ
೧ ಈಗ ಅಂತರ ಬಿಟ್ಟು ಮಲಗುವರು, ಇಬ್ಬರದು ಹಾಸಿಗೆ ಬೇರೆ; ಅವನ ಕೈಯೊಳಗೊಂದು ಗ್ರಂಥ, ಬಹಳ ಹೊತ್ತಿನವರೆಗು ರಾತ್ರಿಯಲ್ಲಿ ದೀಪ; ಬಾಲ್ಯದ ಕನಸು ಕಾಣುವ ಮುಗ್ಧ ಹುಡಿಗೆಯಂತಿವಳ ಮುಖ ಚಹರೆ, ಅಲ್ಲಿ ಗಂಡಸರೆಂಬ ಸುಳಿವಿಲ್ಲ- […]
ಇರುವ ಅಲ್ಪದರಲ್ಲಿ ತೃಪ್ತಿಯು
ಇರುವ ಅಲ್ಪದರಲ್ಲಿ ತೃಪ್ತಿಯು, ಅಧಿಕವಿದ್ದರೆ ಮೋದವು. ಚಿಂತೆ ಕಾಳಜಿಯಿಂದ ಕೂಡಿಡುವಂತೆ ಬಂದರೆ ಸಮಯವು ನುಸುಳಿ ನನ್ನೆಡೆ ಬರುವ ಹೊತ್ತಿಗೆ ಅವಕೆ ರುಚಿ ತೋರಿಸುವೆನು: ಬುಂಡೆಯಲಿ ನೊರೆ ಹೆಂಡವೀಯುತ ಹಳೆಯ ಹಳ್ಳಿಯ ಹಾಡನು. ಪೀಡಿಸುವ ಯೋಚನೆಯ […]
ನನಗೆ ನನ್ನವಳೆ
ನನಗೆ ನನ್ನವಳೆ ಹೆಂಡತಿಯಿರುವಳು ಉಳಿದರ ಜೊತೆ ನಾ ಕೂಡಿಲ್ಲ; ಯಾರೂ ಅನ್ನರು “ಜಾರೆಯ ಗಂಡ” ಬೇರೆ ಮಿಂಡರದು ಭಯವಿಲ್ಲ. ಖರ್ಚಿಗಿಹುದು ಒಂದಾಣೆ ನನ್ನ ಬಳಿ ಯಾರುಪಕಾರವು ಬೇಕಿಲ್ಲ; ಕೈಗಡ ಕೊಡುವದಕೇನೂ ಇಲ್ಲ, ಮಂದಿಗೆ ಸಾಲವ […]
ಒಡಲ ನರಕದ ಭಾಂಡ
ಒಡಲ ನರಕದ ಭಾಂಡ ಕುದಿಸಿ ಭಟ್ಟಿಯ ತೆಗೆದ ಮೋಹಿನಿಯ ಕಣ್ಣೀರ ಗುಟುಕನೆಷ್ಟೋ ಕುಡಿದೆ. ಭರವಸೆಗೆ ಅಂಜಿಕೆಯ, ಶಂಕೆಗಾಸೆಯ ಸವರಿ ಕಳಕೊಂಡೆ ಗೆದ್ದೆನೆನ್ನುತ ಕೈಗೆ ಬಂದುದನು. ನಾ ಸುದೈವಿಯು ಎಂದು ಹಿಗ್ಗಿ ಹಾರೈಸಿರಲು ಯಾವ ಅಪರಾಧಕೀ […]
ಅಮೃತ ಶಿಲೆಯಲ್ಲ
ಅಮೃತಶಿಲೆಯಲ್ಲ, ಅರಸರಟ್ಟಹಾಸದ ಸ್ವರ್ಣ- ಸ್ಮಾರಕವಲ್ಲ- ಈ ಕವನ ಭವನದ ಎದುರು; ದಿನ ದಿನಕೆ ಮಾಸಿ ಬುರುಸುಗಟ್ಟುವದು ಕಲ್ಲಿನ ಪ್ರತಿಮೆ; ನುಡಿಯೊಳಗೂ ಮತ್ತಿನಿತು ಹೊಳೆದು ಹೊಡಕರಿಸಿ ನಿಲ್ಲುವ ನೀನು; ಕಾಳಗದಲೆಲ್ಲ ವಿಗ್ರಹ ಹಾಳು. ಗಲಭೆಯಲಿ ಭಾರಿ […]
