ಮಾತಿನ ಗುಟ್ಟು

`ಮಯೂರ’ ಕ್ಕಿಂತ `ಸುಧಾ’ ವಾಸಿಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟುಅಂದ್ಕೊಂಡೆ: ಆಸಾಮಿ ಗಟ್ಟಿ.ಆಮೇಲೆ ಅರಿತೆ ಶೆಟ್ರು ಆ ದಿವ್ಸಆಡಿದ ಮಾತಿನ ಗುಟ್ನ_“ಅನುಭವದ ಮಾತು ನಾನಂದದ್ದು:ಕಟ್‌ಬಹುದು ದೊಡ್ಡ ದೊಡ್ಡ ಪೊಟ್ನ”.*****

ವಕ್ರ ರೇಖೆ

೧ ನಗರ ಮಧ್ಯಕೆ ನುಗ್ಗಿ ದೂರದ ದಿಗಂತಗಳ ಕನಸು ಕಾಣುತ್ತಿರುವ ಟಾರು ಬೀದಿ- ಸಂತೆ ಮೂಟೆಯ ಹೊತ್ತ ಬಾಡಿಗೆಯ ಚಕ್ಕಡಿಗೆ ಸನಿಹದಲ್ಲಿಯೆ ಬೇರೆ ಹೊರಳು ಹಾದಿ. ಓಣಿ ಓಣಿಯ ಸುತ್ತಿ ಸಂದಿ-ಗೊಂದಿಗೆ ಹಾಯ್ದು ಇದ್ದಲ್ಲಿಯೇ […]

ಗುರುತು

ಅಲ್ಲಿ ರಸ್ತೆಯ ಮೇಲೆ ಸಿಕ್ಕಾಗ ಹಲೋ ಎಂದೆವು ಅಲ್ಲೇ ನಾವು ನಂತರ ನಕ್ಕೆವಿರಬೇಕು ಈಗ ಮರೆಯುತ್ತಿದ್ದೇವೆ ಭಾವಗಳನ್ನು ಕ್ಲಿಷ್ಟ ಸ್ವಭಾವಗಳನ್ನು ಸುಪ್ತ ಅಭಾವಗಳನ್ನು ತಿರುವುಗಳಲ್ಲಿ ನೀವೆಲ್ಲ ಸಿಗರೇಟು ಹಚ್ಚಿದ್ದು ನನಗೆ ಬಲವಂತ ಮಾಡಿದ್ದು ನಾನು […]

ಜೀರ್‍ಣೋದ್ಧಾರ

೧ ಹೊರಗೆ ಭಾರೀ ಥಂಡಿ ನೆಲದ ಮೇಲಿದ್ದುದೆಲ್ಲವ ದುಂಡುಸುತ್ತಿ ಮೇಲೆತ್ತಿ ಎಲ್ಲಿಗೋ ಒಯ್ದು ಒಗೆಯುತ್ತಿಹುದು ಗಾಳಿ! (ಕಂಡ ಕಂಡವರ ಬಾಚಿ ತಬ್ಬಿಕೊಳ್ಳುವದಿದರ ಕೆಟ್ಟಚಾಳಿ) ಗುಡ್ಡ ದೋವರಿಯಿಂದ ಸಂದಿಗೊಂದಿಗಳಿಂದ ಒಮ್ಮೆಲೇ ಇದರ ದಾಳಿ. ಶ್ರಾವಣದ ಹಸಿರು […]

ನನ್ನ ನಾಲಿಗೆಯಲ್ಲಿ ಮಲ್ಲಿಗೆಯ ಬೆಳೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಅಯ್ಯಾ, ನನ್ನ ಆತ್ಮ ಕನ್ನಡಿಯಂತೆ ಗುಟ್ಟು ಹೊರ ಚೆಲ್ಲುತ್ತದೆ ನಾನು ಮೂಕ, ಆದರೆ ಅದು ತಿಳಿಯುತ್ತದೆ ಅಯ್ಯಾ, ದೇಹ ಹೊರದಬ್ಬಿದ ಪರದೇಶಿ ನಾನು, ಚೈತನ್ಯಕ್ಕೆ ನಾನೆಂದರೆ […]

ಶಿಶು ಕಂಡ ಕನಸು

೧ ಇವನ ಹಾಲ್ದುಟಿಯಂಚಿನಲ್ಲಿ ಮಿಂಚುವ ನಗೆಯು ತುಂಬುಗಣ್ಣುಗಳಲ್ಲಿ ಹೊಳೆವ ಬದುಕು, ಧ್ವನಿತರಂಗದಲೆದ್ದು ತೇಲಿ ಬರುತಿಹ ನಾದ ಚಂದ್ರ-ದೋಣಿಯನೇರಿ ಹುಟ್ಟು ಹಾಕು- ಹೂವಿಗೆರಗಿದ ತುಂಬಿ, ಸಿಂಪಿಗೊರಗಿದ ಮುತ್ತು ತಂಪುಗಾಳಿಗೆ ಬಿರಿದ ಸಂಪಿಗೆಯ ಮೊಗ್ಗು, ತೆಂಗಿನೊಳಗಿನ ತಿಳಿಲು, […]

ಅಂಟಿಗ

ಬಾಲು ಬೀದೀಲಿ ಸಿಕ್ಕಾಗ ಬೀಳ್ತಾನೆ ದುಂ ಬಾಲು. ಮಾಡ್ತಾನೆ ಚಾಲು ಕೊರೆಯೋಕೆ ಸೊಲ್ಲಿನ ಜೊತೆ ಜೊಲ್ಲು ಎರೆಯೋಕೆ. ಕಳಚಿಕೊಳ್ಳೋಕೆ ಬಿಡ ಈ ನರರೂಪಿ ಉಡ. ಅದಕ್ಕೇ ಅವನಿಗನ್ನೋದು ನಾವೆಲ್ಲ: “ಬಾಲು, ನೀನು ಮನುಷ್ಯ ಅಲ್ಲ, […]

ಅಪರಾವತಾರ

ಚೋಟುದ್ದ, ಗೇಣುದ್ದ, ಆಕಾಶದುದ್ದ ಕುತುಬ ಮೀನಾರಕ್ಕೆ ಕೈಯೂರಿ ಎದ್ದ! ಕೆರೆಯಿಂದ ಸಾಗರದವರೆಗೆ ಸಾಗರಬಿದ್ದ ರಾಡಿ ಮೈಯಿಂದಲೇ ಮೇಲಕೆದ್ದ- ಗೌರಿಶಂಕರ ಶಿಖರ ಏರಬೇಕೆಂದಿದ್ದ ಆದರೀಗಾಗಲೆ ಅದು ನಿಷಿದ್ಧ. ಬುದ್ಧನೊಬ್ಬನು ಬೇರೆ ಆಗಿ ಹೋಗಿದ್ದ ಇಲ್ಲದಿದ್ದರೆ ಇವನ […]

ನನ್ನ ಕನಸಿನ ನಾಡು

ಸಿಗಲಿ ಪ್ರತಿಯೊಬ್ಬನಿಗೊಂದು ಗಟ್ಟಿ ತಲೆದಿಂಬು ಅಥವಾ ದಿಂಬಿದ್ದವನಿಗೊಂದು ಗಟ್ಟಿತಲೆ ಗಟ್ಟಿಯೆಂದರೆ ಗಟ್ಟಿ ಮುಟ್ಟಾದ ತಲೆ ಕಲ್ಲಿನಂಥಾ ಖರ್‍ಚಾದ ಬ್ಯಾಟರಿ ಸೆಲ್ಲಿನಂಥಾ ತಲೆ ಮತ್ತೆ ಹಾಸಿರಲಿ ಮೆತ್ತನೆ ಮೆತ್ತೆ ಮಂಚ ಸುತ್ತಾ ಹಾಯಾಗಿ ತೂಗಿ ಬಿದ್ದಿರಲಿ […]

ಯುಗಾದಿ

ಕರೆಯದಿದ್ದರು ನಾವು ನೀನು ಬಂದೇ ಬರುವಿ ಅಲ್ಲವೆ? ಬಾ ಮತ್ತೆ, ಬಾ ಯುಗಾದಿ; ಎಂಥ ಬಿಸಿಲೊಳು ಬಂದೆ! ಬೇಕೆ ಬಾಯಾರಿಕೆಗೆ ಬೇವು-ಬೆಲ್ಲ? ಚಹಕೆ ಸಕ್ಕರೆಯಿಲ್ಲ; ನಡೆದೀತೆ ಬರಿಯ ತಣ್ಣೀರ ಗುಟುಕು? ಇದು ಹೋದ ವರುಷವೇ […]