ಅಖಂಡ ಕರ್ನಾಟಕ

ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […]

ಹೊಸ ಬಾಳು ನಮ್ಮದಿದೆ

ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ ಬಿಟ್ಟು ಬಿಡಿ ಅವರವರ ಪಾಡಿಗಿನ್ನು – ಯುವ ಜನಾಂಗವೆ ಬನ್ನಿ ನವರಂಗಕೆ ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; ಮೂಲೆಯಲ್ಲವಿತವಗೆ […]

………. – ೮

ಹನ್ನೆರಡು ಅಂಕಿಗಳ ಮಂಡಲದಲ್ಲಿ ಹಿಡಿದಿಟ್ಟ ಹಗಲು ರಾತ್ರಿಗಳು ಕತ್ತಲೆ ಬೆಳಕು ನೆನ್ನೆ ನಾಳೆಗಳಿಗೆ ಅವಕಾಶ ಗೋಲಾಕಾರ ಸಮಯ ಕಾಲಾತೀತ. ಡಿಜಿಟಲ್ ಗಡಿಯಾರದಲ್ಲಿ ಕಾಲಕ್ಕೆ ರೂಪವೇ ಬೇರೆ. *****

ಆಕಾಶಬುಟ್ಟಿ

೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […]

ಬೋರು ಕಣೆ ಲೀನ

ಲೀನಾ- ಯುಗಾದಿ ಬಂತು ಗೊತ್ತ ಬೋರು ಕಣೆ ಮಾಮೂಲು ಬದಲಾವಣೆ ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ ಒದ್ದೆಯಾಯಿತು ಸಂಜೆ. ಹೌದೆ ಕತ್ತಲಿಗು ಬತ್ತಲಿಗು ನಂಟೆ ? ಓಹೋ ನಮಗಾಗೂ ಉಂಟಲ್ಲ ಬಯಲು ತಂಟೆ […]

ಪ್ರಾರ್ಥನೆ

ಇವು ನನ್ನ ಹಾಡೆಂಬ ಹಗರಣದಿ ಮೈಮರೆತು ಅಹಮಿಕೆಯ ದರ್ಶನವ ಮಾಡಲೇಕ್ಕೆ ದೇವ; ನೀನಿತ್ತ ಸಂಪದವ, ನಿನ್ನಾಣತಿಗೆ ಮಣಿವ ಅಣುರೇಣು ಜೀವಾಣು ನಿನ್ನ ಚರಣವನೋತು ಚೆಲುವಿನೊಲವಿನ ವಿವಿಧ ವಿನ್ಯಾಸಗಳನಾಂತು ಹೆಜ್ಜೆಯಿಡುತಿರಲದರ ಹಲವಾರು ಹವಣಿಕೆಯ ಕರಣಿಕನು ನಾನಾಗಿ […]

ಚೆನ್-ಬೆಳಕು

ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು ಮುದ್ದೆಯಾಗಿದೆ ಜೀವ ನೋವನುಂಡು; ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ ಬೇಳುವೆನೊ-ಏನೊಂದನರಿಯೆ ನಾನು. ಬಾಂದಳದ ಪೆಂಪಿನಲಿ ಕಂಡ ನೀನು; ‘ಉದಯವಾಯಿತು’ ಎಂದುಕೊಂಡೆ ನಾನು. ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ […]

ನಮ್ಮ ಬಾಪು

ಮುಟಿಗೆಯಳತೆಯ ಬರಿಯ ಅಸ್ತಿ ಚರ್ಮದಲಿನಿತು. ಔಂಸು ತೂಕದ ರಕ್ತ ಮಾಂಸವೆರಡನು ಬೆರಸು; ಉಕ್ಕುತಿಹ ಒಲುಮೆ ಕಡಲಗಲದೆದೆಯನ್ನಿರಿಸು; ಅಂತದಕೆ ಕಡಲಾಳ ನಿಷ್ಪಾಪ ಮನವಿತ್ತು ಅಂಟಿಸೆರಡಾನೆಕಿವಿ….. ಮಿಳ್ಮಿಳದ ಕಣ್ಣೆರಡು ತಾಯನಪ್ಪಿದ ಕೂಸಿನೆಳನಗೆಯ ಬಣ್ಣಗೊಡು; ಹಿಮಶಿಖರದೆತ್ತರದ ಬಿತ್ತರದ ಆತ್ಮವಿಡು; […]

ಪ್ರಾಯ

ಚಿಗುರು ಚಿವುಟಿದರೆ ಜಿನುಗುವ ಸೊಕ್ಕು ಪ್ರಕೃತಿಗೆ ಹಸಿರುಕ್ಕುವ ಗೀಳು ಖುಷಿ ಕನಸು ಋತು ಮನಸು ಕೆನೆಗಟ್ಟಿ ಮಧುರ ತುಷಾರದ ಗೊಂಬೆ ಕೇಕೆ ತಮಾಷೆ ಕೊನೆಮನೆಯ ಕಾಮಾಕ್ಷಿ ಕಾಮ ಉಲಿಯುವದಿಲ್ಲ ಕೆಟ್ಟ ಹುಡುಗಿಯ ದಿಟ್ಟ ತೊಗಲಿನ […]

ನಾವು ನಾಲ್ವತ್ತು ಕೋಟಿ

ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […]