ಮೊದಲ ಮಳೆ

ಬಿಸಿಲೇರಿತು, ಬಾಯಾರಿತು ಹುರುಪಳಿಸಿತು ನೆಲವು, ಗುಟುಕರಿಸಿತು ಜಲವು; ಬಾನುದ್ದಕು ಧೂಳೆದ್ದಿತು ತತ್ತರಿಸಿತು ಬಲವು. ಮುಚ್ಚಂಜೆಯು ಮೈಚಾಚಿತು, ಗರಿಬಿಚ್ಚಿತು ಮೋಡ, ಹೊರಬಿದ್ದಿತು ಗೂಢ; ಮುಂಗಾರಿನ ಮುಂಗೋಪಕೆ ಬಾನೇ ದಿಙ್ಮೂಢ. ಮಳೆವನಿಗಳ ಖುರಪುಟದಲಿ ಮುಗಿಲಂಚನು ಸೀಳಿ ಅಗೊ […]

ರಂಜನಾ

ರಂಜನಾ- ಎಲ್ಲಿ ಕುಳಿತರು ಬಂದು ಕಿವಿಗೆ ಝೇಂಕರಿಸುವುದು ಮನೆ ತುಂಬ ಹರಿದಾಡಿ ಮರಿದುಂಬಿ ಗುಂಜನ; ಕಣ್ಣು ನೀಲಾಂಜನ, ಕರಗಿಸಿದ ನಕ್ಷತ್ರ ಮೂಗು ಹಟಮಾರಿತನಕೊಡೆದ ಮೊಗ್ಗು – ಗೋಣು ಹೊರಳಿಸಿ ಸೋಗು ಮಾಡಿ ಕುಣಿವೀ ನವಿಲು […]

ಮುದ್ದು ಮಕ್ಕಳಿಗೊಂದು ಕವಿತೆ

ನೀಟಾಗಿ ಪುಟು ಪುಟು ಎಳೆ ಕ್ರಾಪು ಬಾಚಿ ಪೌಡರು ಘಮ ಘಮಿಸುವ ಪುಟಾಣಿ ಮಕ್ಕಳೇ ಖುಷಿಯಾಗುತ್ತದೆ ನಿಮ್ಮ ಕಂಡು -ನಿಮ್ಮ ಹಾಗೆಯೇ ನಾನೂ ಇದ್ದೆನಲ್ಲಾ ತಕ್ಷಣ ನೋಯ್ದು ಕಹಿಯಾಗುತ್ತದೆ ಮನ -ನನ್ನ ಹಾಗೆಯೇ ಮುಂದೆ […]

ದೀಪಮಾಲೆಯ ಕಂಬ

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಮಿದುವಾಗಿ ಹದಗೊಂಡು ಹರಿವುದೀ ಹಾಡು! ಗೂಡಿಂದ ಬಾನಿನಂಗಣಕೇರಿ ಕರೆಯುತಿದೆ, ಸಹ್ಯಾದ್ರಿ ಶಿಖರದಲಿ ನಿಂತು ನೋಡು; ಮೂಡಪಡುವಲ ತೆಂಕು ಬಡಗು ಕೊಡಗಿನ ನಾಡು ಎಲ್ಲ ಒಂದೇ ಯಶದ ರಸದ […]

ಕೊನೆಯ ನಿಲ್ದಾಣ

೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು, ಎಲ್ಲಿಯೋ ಏತಕೋ ಅವಸರದ ಕೆಲಸ, ಮನದ ಕೊನೆಯಂಚಿನಲಿ ಮತ್ತಾವುದೋ ಸರಸ ವಿರಸ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ ಮಿಂಚಿನ […]

ವಿಕಾರಿ

‘ಬಿಕೊ’ ಎನ್ನುತಿದೆ, ಹಾಳು ನೀಲಿಯ ಸುರಿವ ಆಕಾಶ. ಅಲ್ಲಿ ಒಂದೇ ಸಮನೆ ಚಕ್ರ ಹಾಕುವ ಹದ್ದು- ಅದಕೆ ಮದ್ದು. ವಕ್ರ ಹಳಿಗಳಗುಂಟ ಹೊಟ್ಟೆ ಹೊಸೆಯುತ ಹೊರಟು ನಿಂತಿಹುದು ರೈಲು. ಬಿಸಿಲ ನೆತ್ತಿಯ ಬಿರಿವ ಸಿಳ್ಳು, […]

ಏತನ್ಮಧ್ಯೆ

ನುಗ್ಗೇಕಾಯಿ ಸಾಂಬಾರಿನ ಪರಿಮಳದ ಓಣಿಗಳಲ್ಲಿ ದಾರಿ ಬದಿ ಮನೆ ಮನೆಯಂಗಳದಿ ತುಳಸೀಕಟ್ಟೆಗೆ ಸುತ್ತು ಹಾಕುವ ಹಳದೀ ಮುತ್ತೈದೆಯರು ಅಂಗಡಿ ಗಲ್ಲಾಗಳಲ್ಲಿ ದಿಂಬು ಕೂತ ಮೂರು ನಾಲ್ಕು ಲಾರಿಗಳುಳ್ಳ ಅವರ ದೊಗಳೆ ಗಂಡಂದಿರು ಊರ ಹೊರಗೆ […]

ಲಾಗ

ಲಾಗ ಹೊಡಿಯಲೊ ಮಂಗ, ಲಾಗ ಹೊಡಿಯಲೊ ಮಂಗ ಬಗ್ಗಿ ದಣಿಯರ ಮುಂದೆ ಲಾಗ ಹೊಡಿಯೊ; ಹಾಕು ಅಂತರ್‍ಲಾಗ, ಹಾಕು ಜಂತರ್‍ಲಾಗ- ನೆರೆದ ಮಹನೀಯರಿಗೆ ಶರಣು ಹೊಡಿಯೋ! ಇಸ್ತ್ರಿ ಮಾಡಿದ ಪ್ಯಾಂಟು, ಕ್ರಾಪು ತಲೆ, ಬುಶ್ […]

ನಾಳಿನ ನವೋದಯ

೧ ಬೆಳಗಾಯಿತು- ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಹೊಂಬಿಸಲು ಸೂಸಿ ಹೂಗಾಳಿ ಹರಿದಾಡಿತು. ನೀಲಿಯಾಗಸದ ತೊಳೆದ ಪಾಟಿಯ ಮೇಲೆ ಹಕ್ಕಿ ಧ್ವನಿ ತೀಡಿತು ಹೊಸದೊಂದು ವರ್‍ಣಮಾಲೆ! ಕೆಂಪು ಕೋಟೆಯ ಭುಜಕೆ ಧರ್‍ಮಚಕ್ರ ಧ್ವಜವನಿರಿಸಿ ತಾಜಮಹಲಿನ ಹಾಲುಗಲ್ಲಿನಲಿ […]

ವಕ್ರ ರೇಖೆ

೧ ನಗರ ಮಧ್ಯಕೆ ನುಗ್ಗಿ ದೂರದ ದಿಗಂತಗಳ ಕನಸು ಕಾಣುತ್ತಿರುವ ಟಾರು ಬೀದಿ- ಸಂತೆ ಮೂಟೆಯ ಹೊತ್ತ ಬಾಡಿಗೆಯ ಚಕ್ಕಡಿಗೆ ಸನಿಹದಲ್ಲಿಯೆ ಬೇರೆ ಹೊರಳು ಹಾದಿ. ಓಣಿ ಓಣಿಯ ಸುತ್ತಿ ಸಂದಿ-ಗೊಂದಿಗೆ ಹಾಯ್ದು ಇದ್ದಲ್ಲಿಯೇ […]