ಕವಿತೆ ಬರೆಯುತ್ತೇನೆಯೆ ನಾನು? ಇಲ್ಲ ಬಿಡು ನಿನಗಾಗಿ ನಾನು ಸತ್ತುಕೊಳ್ಳುವದಿಲ್ಲ ಇಲ್ಲದವುಗಳ ಬಿಚ್ಚಿ ತೆತ್ತುಕೊಳ್ಳುವದಿಲ್ಲ ಮೊಲೆಯಿರದ ಮೊಳಕೆಗಳ ಬಿತ್ತುಕೊಳ್ಳುವುದಿಲ್ಲ ನೀನೇನೋ ಅಂದುಕೊಂಡಿದ್ದೀಯ ಎಂದು ಅವರಂತಾಗಲು ವ್ಯಕ್ತಿತ್ವ ಸ್ಖಲಿಸಿಕೊಂಡು ಆಕಾಶದಲ್ಲಿಯೇ ಮನೆ ಕಟ್ಟಿಕೊಳ್ಳುವುದಿಲ್ಲ. ತಪ್ಪಿಸಿಕೊಳ್ಳುತ್ತ ಹಗುರು […]
ಕಿತ್ತೂರಿನ ಕಿಡಿಗಳು
ಗುಣದಲ್ಲಿ ಗೌರಿ, ಕೆಚ್ಚೆದೆಯಲ್ಲಿ ಚಾಮುಂಡಿ, ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು ಕಿತ್ತೂರ ರಾಣಿ, ಬಜ್ಜರದ ಕಿಡಿ! ಮಾರ್ಪೊಳೆದು ಭೀರು ಭೀರುಗಳೆದೆಗೆ ಬೀರ ಚೇತನೆಯೂಡಿ ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ ಮೈದುಂಬಿ ಮೇಲೆದ್ದ ಯೋಧಪಡೆ, – ಸಂಗೊಳ್ಳಿ […]
ಪ್ರಳಯದ ಅಲೆಯ ಮೇಲೆ ನಾನು ಹೊರಟೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ ಹಿಡಿದೆಳೆದು ಒಂಟೆಗಳ ಸಾಲಿಗೆ ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” […]
ಕಿತ್ತೂರ ಕೋಟೆಯನ್ನು ಕಂಡು
ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […]
ಜನಾಕರ್ಷಣೆಗೊಂದು ಹೊಸ ಗಿಮಿಕ್ಸ್: ಆಂಟಿ ಪ್ರೀತ್ಸೆ
ಮೆಗಾ ಧಾರಾವಾಹಿಗಳಿಂದ ಹಾಗೂ ಸಿನಿಮಾ ಆಕರ್ಷಣೆಯಿಂದ ನಾಟಕಗಳಿಗೆ ಜನ ಬರುತ್ತಿಲ್ಲ. ರಂಗಭೂಮಿಯವರೆಲ್ಲ ಸಿನಿಮಾ ಟೀವಿಗಳಿಗೆ ರಫ್ತಾಗುತ್ತಿದ್ದಾರೆ. ಸೆಕೆಂಡ್ ಲೈನರ್ಸ್ನ ಬೆಳೆಸುವಲ್ಲಿ ಹಿರಿಯರು ಪ್ರೀತಿ ತೋರುತ್ತಿಲ್ಲ ಎಂಬೆಲ್ಲ ಮಾತು ಕ್ಲೀಷೆಯಾಗಿದೆ ಇಂದು. ಇಂಥ ವೇಳೆ ಕೋಟಿ […]
ಶ್ವೇತಪುತ್ರಿ
ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ ತೊಡಿಸುತ ಬರುತಿಹ ಒಯ್ಯಾರಿ! ಹೊಗೆಯ ಸುರುಳಿಗಳ ಅರಳಿನ ಮಾಲೆಯ ಕೊರಳಿಗೆ ಸೂಡುವ ಸುಕುಮಾರಿ! ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ ಕೆಂಗಿಡಿ ಕೆಂಬರಳಿನ ನತ್ತು, ನಿರಾಭರಣ ಸುಂದರಿ ಸುವಿಲಾಸಿನಿ ಕಲಿಸಿದರಾರೀ ಹೊಸ […]