ಬಿಟ್ಟ ನಿಟ್ಟುಸಿರ ಸ್ವರ ಸಮ್ಮಿಳಿಸಿ ಸಂ ಯೋಜಿಸಿ ಮಿಡಿ ಮಿಡಿ ದು- ಹೂ ಹಾ ರ ತರಂಗ ಮೀಟುವ ಕೊಳಲೇ ನಿನ್ನ ದನಿಯೊಡಲ ಬೇರು ಬಿಟ್ಟಿರುವುದು ಇಲ್ಲೇ ಈ ನನ್ನ ಗಟ್ಟಿಗಂಟಲ ಒಳಪೆಟ್ಟಿಗೆಯಲ್ಲೇ ಆದರೆ […]
ಕವಿತೆಗೆ
ಕವಿತೆ! ಸುಲಲಿತ ಭಾವಸಂಪ್ರೀತೆ, ನನ್ನೆದೆಯಸುಪ್ತಸುಖದುಃಖ ವೀಣಾಕ್ವಣಿತ ಸಂಗೀತೆಚೈತ್ರಮುಖಿ ಕಣ್ಣನರಳಿಸು ವಿಮಲವಿಖ್ಯಾತೆ!ಏನಿದ್ದರೇನು ವಿಶ್ವಂಭರಿತೆ ನಿನ್ನುದಯಚಿರನೂತನೋತ್ಸಾಹ ಚೇತನಂ ಪಡೆವನಕಕವಿಮನವು ಬರಿಯುದಾಸೀನ ರಸಹೀನತೆಯದೀನತೆಯ ತವರು; ಅದೂ ವಿಶ್ವಮೋಹಿನಿ ಉಷೆಯಚುಂಬನುತ್ಕರ್ಷತೆಗೆ ಭೂಮಿಗಿಳಿದಿದೆ ನಾಕ!ಅವುದೋ ಮೂಲೆಯಲಿ ಕುಳಿತು ಭೂರಂಗದಲಿನಡೆವ ಅಕಟೋವಿಕಟ ನಾಟಕದ […]
ಮಾಮರವೆಲ್ಲೋ ಕೋಗಿಲೆ ಎಲ್ಲೋ ಒಂದೂ ಅರಿಯೆ ನಾ?
‘ರೂಪಾಂತರ’ ನಾಟಕದ ಮೊದಲ ಪ್ರದರ್ಶನದ ನಂತರ ಪ್ರೇಕ್ಷಕರ ಪ್ರತಿಕ್ರಿಯೆ ಗಮನಿಸಿ-ಹಲವು ಆತ್ಮೀಯರೊಂದಿಗೆ ಚರ್ಚಿಸಿ ರಂಗ ಪ್ರತಿಗೊಂದು ಹೊಸ ರೂಪ ಕೂಡಲು ಕುಳಿತಾಗ-ಟೇಪ್ ರೆಕಾರ್ಡರ್ನಲ್ಲಿ ಮಾಮರವೆಲ್ಲೋ ಕೋಗಿಲೆ ಎಲ್ಲೋ? ಗೀತೆ ಅಲೆ ಅಲೆಯಾಗಿ ತೇಲಿ ಬರುತ್ತಿತ್ತು. […]
ಗಾಂಧಿ ಮತ್ತು ಅಂಬೇಡ್ಕರ್
(ಎಸ್ ಚಂದ್ರಶೇಖರ್‌ರವರ ‘ಅಂಬೇಡ್ಕರ್ ಮತ್ತು ಗಾಂಧಿ” ಕೃತಿಗೆ ಮುನ್ನುಡಿ) ಚಂದ್ರಶೇಖರರ ಮೊದಲ ಬರವಣಿಗೆಗಲೇ ಕನ್ನಡದಲ್ಲಿ ಹೊಸ ಗಣ್ಯ ಇತಿಹಾಸಕಾರರೊಬ್ಬರು ಬರುತ್ತಿರುವುದನ್ನು ಕಾಣಿಸಿದವು. ಆಗಿಂದಲೂ ಅವರು ಬರೆದದ್ದನ್ನು ಓದಿ ಮೆಚ್ಚಿಕೊಳ್ಳುತ್ತ ಬಂದಿರುವ ನನಗೆ ಪ್ರಸ್ತುತ ಸಂಕಲನ […]
ಬುದ್ಧಿ ಮಾತು
“ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****
ಮುದ್ದಣ-ಮನೋರಮೆ
ಮುದ್ದಣ ಮನೋರಮೆಯರಿನಿವಾತನಾಲಿಸಲು ಕನ್ನಡದ ಬೆಳ್ನುಡಿಯ ಹೊಂಬೆಳಗಿನುನ್ನತಿಯ ಕಾಣಲೆಂದಾಸೆಯಿರೆ ಜೇನುಂಡ ಆರಡಿಯ ಝೇಂಕೃತಿಗೆ ಕಿವಿದೆರೆದು ಕೇಳು ಎದೆತಣಿಯುವೊಲು. ತನಿವಣ್ಣ ತಿನಲಿತ್ತು ಕೆನೆವಾಲನೀಯುವರು. ಏನು ಜೊತೆ! ಎಂಥ ಕಥೆ! ನಾಲ್ಮೊಗನ ಅಗ್ಗಿಟ್ಟಿ- ಯೊಗೆದ ಮುತ್ತಿನ ಚೆಂಡು! ಮಾತೊಂದು […]
‘ಪಂಚತಂತ್ರ’ ಮೆಲುಕು ಹಾಕಿದಾಗ…
ಟಿ.ಪಿ.ಮಹಾರಥಿಯವರ ‘ಪಂಚತಂತ್ರ’ ಕೃತಿ ಕನ್ನಡಕ್ಕೆ ಅನುವಾದಿಸುವ ಹೊಣೆ ನನ್ನ ಪಾಲಿಗೆ ಬಿಟ್ಟರು ಈಟೀವಿ ನಿರ್ವಾಹಕರು. ಮಕ್ಕಳು ಹಾಗೂ ದೊಡ್ಡವರಿಗೂ ಪ್ರಿಯವಾಗುವ ಬೊಂಬೆಯಾಟವಾಗಿ ಕಿರುತೆರೆಯಲ್ಲಿ ಅದು ಬರುವುದೆಂದಾಗ-ಪಪೆಟೆಯರ್ ಆದ ನನಗೂ ಅದು ಪ್ರಿಯವೆನಿಸಿತು. ಅನುವಾದ ಕಾರ್ಯ […]
ಜ್ವರ-ಒಂದು ಆಕ್ರಮಣ
೧ ಬಿಸಿ ಬಿಸಿ ಜ್ವರ ಹೊದ್ದು ಕುದಿಯುತ್ತ ಮಲಗಿದ್ದೆ ಹೊರಗೆ ಐಸ್ ಕ್ಯಾಂಡಿಯವನು ಕೂಗಿಕೊಳ್ಳುತ್ತಿದ್ದ ಈಗೆಲ್ಲ ಕಣ್ತುಂಬ ಫಕ್ತ ಚಿನ್ಹೆಗಳು ಕಪ್ಪು ಅವಕಾಶ ಮೋಡ ಮುಚ್ಚಿದ ಗಗನ ರೂಹು ತಾಳದೆ ಬಿದ್ದ ಬೆನಕನ ಮಣ್ಣು […]
