ಅಡ್ಡ ವೈಸು

“ಗೀತಾ, ಮನೆ ಮುಗೀತಾ? ಯಾವಾಗ ಗೃಹಪ್ರವೇಶ?” “ಮುಗೀತೂರಿ, ಆದ್ರೆ ಕಂಟ್ರಾಕ್ಟರ್ ಮಾಡ್ದ ಸಖತ್ ಮೋಸ”. “ಯಾಕೆ? ಏನಾಯ್ತು ಅಂಥದ್ದು? ಪೀಕಿಸಿದ್ನ ದುಡ್ಡು ಜಾಸ್ತಿ?” “ಅವನ ಮನೆ ಹಾಳಾಗ, ಕರಗಿಸಿಬಿಟ್ಟ ಕಣ್ರಿ ಇದ್ದ ಬದ್ದ ಆಸ್ತಿ”. […]

ಯುಗ ಯುಗದ ಹಾಡು

ಯುಗ ಯುಗಕೂ ಉರುಳುತಿಹುದು ಜಗದ ರಥದ ಗಾಲಿ, ಹಗಲು ಇರುಳು ಮರಳಿ ಮಸೆದು ಸಾಹಸ ಮೈತಾಳಿ. ಕಾಡು-ನಾಡು, ದೇಶ-ಕೋಶ ಭಾಷೆ-ಭಾವ ದಾಟಿ, ಭೂಮಿ-ಬಾನು, ಬೆಂಕಿ-ನೀರು ಗಾಳಿ-ರಾಟಿ-ಧಾಟಿ. ನವ ಜನಾಂಗ ಮೂಡಿ, ಮೊಳಗಿ ಬದುಕು ತಿದ್ದಿ […]

ಜೀವರಸಾಯನಶಾಸ್ತ್ರ

ಜೀವರಸಾಯನಶಾಸ್ತ್ರವನ್ನು ನಾನೀಗ ಅಭ್ಯಸಿಸುತ್ತಿದ್ದೇನೆ….. ಜೀವರಸಾಯನಶಾಸ್ತ್ರಕ್ಕೆ ಜೀವವಿಲ್ಲ ಭವಿಷ್ಯದ ಹೊಳಹು ಮತ್ತೆ ಅವಶೇಷದ ಅರಿವು ಹೀಗೆ ಯಾವ ಅವಿರ್‍ಭಾವವೂ ಇಲ್ಲ ಇದಕ್ಕೆ ಪುರಸೊತ್ತಿಲ್ಲದೆ ಮರೆಯಲ್ಲಿದ್ದುದನ್ನ ಸರಸರ ತೆರೆಯಮೇಲೆ ತಂದುಬಿಟ್ಟು ಹೋಗುವದೊಂದೇ ಗೊತ್ತು. ಪ್ರಯೋಗಕ್ಕೆ ಸಿಕ್ಕಿ ನರಳಿ […]

ಭಾವಕೇಂದ್ರ

ನೂರು ಹೂಗಳ ಕಂಪು ತೇಲುತಿದೆ ಗಾಳಿಯಲಿ ಹೀರಿಕೋ; ಅಲ್ಲಿಳಿದ ಮಳೆಯ ನೀರು ಇಲ್ಲಿ ಬಾವಿಗೆ ಸೋಸಿ ಬಂದಿಹುದು, ಸೇದಿಕೋ: ಕಾಣುವುದೆ ಈ ಗಿಡದ ಬುಡದ ಬೇರು? ಸುತ್ತು ಭೂಮಿಯ ಸಾರ ಇದರ ಆಹಾರ; ಹೂ […]

ಕನ್ನಡಿಗೆ ತುಕ್ಕು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಧಣಿಗೇ ಮುಕ್ತಿ ಕೊಟ್ಟ ಜೀತದಾಳು ನಾನು ಗುರುವಿಗೇ ತಿರುವಿದ್ಯೆ ಕಲಿಸಿದವನು ನಿನ್ನೆ ತಾನೇ ಹುಟ್ಟಿದ ಆತ್ಮ ನಾನು ಇಷ್ಟಾದರೂ ಪ್ರಾಚೀನ ಲೋಕಗಳನ್ನು ನಿರ್‍ಮಿಸಿದವನು ನಾನು ಹಾಗೇ […]

ಹೊಸ ಬಾಳಿನ ಯೋಜನೆ

೧ ಇದು ನೆಲದ ತುಂಡಲ್ಲ ಐದು ಖಂಡದ ಅಖಂಡ ಜೀವ ಪಿಂಡ. ಇದರ ಬದುಕಿನ ಮೇರೆ ಭೋರ್‍ಗರೆವ ಸಾಗರವು ಜೊಂಡು ಪಾಚಿಯ ಚಿಕ್ಕ ಹೊಂಡವಲ್ಲ. ವಿಶ್ವದಂಚಿನವರೆಗು ತೇಲಿಬಿಡು ನೌಕೆಗಳ ಸಪ್ತಸಾಗರಗಳನು ಸುತ್ತಿಬರಲಿ; ಕಳಿಸಿದರೆ ಕಳಿಸು […]

ವೈಖರಿ

ಮಣ್ಣಿನ ಮಗನ ಆಡಳಿತ ಬಲು ಭರ್‍ಜರಿ, ನಾಡಿನ ಇತಿಹಾಸದಲ್ಲೆ ಗೋಲ್ಡನ್ ಛಾಪ್ಟರ್; ಚಿರ ವಿನೂತನ ರೈತರ ಉದ್ಧಾರದ ವೈಖರಿ; ಪ್ರತಿ ನಿತ್ಯ ಏರಿ ಕಾಂಟೆಸ, ವಿಮಾನ, ಹೆಲಿಕಾಪ್ಟರ್. *****

ಅಂತೂ ಕೊನೆಗೆ ಬಂತು ಮಳೆ

ಅಂತೂ ಕೊನೆಗೆ ಬಂತು ಮಳೆ- ತಂತಿ ವಾದ್ಯವ ನುಡಿಸು, ಮದ್ದಳೆಯ ಬಡಿ, ಹೂಡಿ ಕೇಕೆ. ಓಡಿ ಹೋಗುವ ಮೋಡಗಳ ಹಿಡಿದು ಹಿಂಡು. ಬಳುಕಿ ಬಾಗುವ ಮಳೆಯ ಸೆಳಕುಗಳ ಸೇವಿಗೆಯ ಸಿವುಡು ಕಟ್ಟಿಡು; ಬೇಕು ಬೇಕಾದಾಗ […]

ಮಾನಭಂಗ

ಬೆಳಕಿನ ನೂಲುಗಳ ಥರ ಥರ ಬಣ್ಣದಲದ್ದಿ ನೇಯುತ್ತಿದ್ದ ಸೂರ್‍ಯ ನಿನಗೊಂದು ಸೀರೆ ಭೂಮೀ ನಿನ್ನ ಮೇಲೇ ಹಠಾತ್ತನೆ ರಾತ್ರಿ ಬಂದು ಹರಿದೊಗೆಯಿತದನ್ನ ನಿರತ ಸೂರ್‍ಯನನ್ನೊದ್ದು ಕಡಲಿನೊಳಗೆ ಅವ ಬಣ್ಣ ತುಂಬಿದ ಕೈಲಿ ನೀರ ಬಡಿಬಡಿದು […]

ನೀರು ಹರಿದಿದೆ ನಿರಾತಂಕ

ಆಗಸದ ಆಣೆಕಟ್ಟನು ಒಡೆದು ನುಗ್ಗಿದವು ನೂರು ನಾಯ್ಗರಾ ತಡಸಲು! ಕಣ್ಣು ಕಟ್ಟಿ, ಗಿಮಿಗಿಮಿ ಗಾಣವಾಡಿಸಿತು ಗಾಳಿ ನೆನೆ ನೆನೆದು ನೆಲವೆ ಕುಪ್ಪರಿಸಿತ್ತು, ಮುಗಿಲು ಹೊಚ್ಚಿತು ಕಪ್ಪು ಕಂಬಳಿಯ ಕತ್ತಲು, ರಮ್….ರಮ್….ರಮ್…. ರಣ ಹಲಗೆ ಸದ್ದಿನಲಿ […]