ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಲೋಕದ ತುಂಬ ಮುಳ್ಳಿದ್ದರೂ ಸರಿ ಪ್ರೇಮಿಯ ಹೃದಯ ಮಾತ್ರ ಸದಾ ಹೂವೇ ಸ್ವರ್ಗದಗಿರಣಿ ಸದಾ ಸೋಮಾರಿ ಪ್ರೇಮಲೋಕ ಸದಾ ಕಾರ್ಯಶೀಲವೇ ಸರಿ ಮುಳುಗಲಿ ಉಳಿದವರು ದುಃಖದಲ್ಲಿ ಹಾರಾಡಲಿ […]
ವರ್ಗ: ಪದ್ಯ
ಶ್ರಾವಣದ ಲಾವಣ್ಯ
೧ ಬಾನ ಸಾಣಿಗೆ ಹಿಟ್ಟು ಸಣ್ಣಿಸಿ- ದಂತೆ ಜಿನುಗಿದೆ ಸೋನೆಯು; ಬಿಳಿಯ ತೆಳು ಜವನಿಕೆಯನೆಳೆದಿಹ ಇಳೆಯು ಸುಂದರ ಮೇಣೆಯು! ಹುಲ್ಲು ಹಾಸಿದೆ, ಹೂವು ಸೂಸಿದೆ ಗಾಳಿ ಮೂಸಿದೆ ಕಂಪನು ಶ್ರಾವಣದ ಲಾವಣ್ಯ ಕುಣಿದಿದೆ ಮಳೆಯು […]
ಸೃಷ್ಟಿ ನೋಂತು ನಿಂತಿದೆ!
೧ ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ! ಹೊಸತು ಆಸೆ ಮೂಡಿದೆ ಹರುಷ ಲಾಸ್ಯವಾಡಿದೆ ಓ! ವಸಂತ ನಿನಗನಂತ ಆಲಿಂಗನ ಸಂದಿದೆ ಸೃಷ್ಟಿ ನೋಂತು ನಿಂದಿದೆ! […]
ಪಂಜರಬಿಟ್ಟು ಹಾರಿದ ಹಕ್ಕಿಗಳೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪಂಜರ ಬಿಟ್ಟು ಹಾರಿದ ಹಕ್ಕಿಗಳೆ ಬಂದು ಒಂದು ಕ್ಷಣ ಮುಖದೋರಿರೆ ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು ಮಾಡು ಮುರಿದು […]
ಬಂತು ಭಾರತ ಹುಣ್ಣಿವೆ!
ಬಂತು ಭಾರತ ಹುಣ್ಣಿವೆ! ತೆರೆದು ಲೋಕದ ಕಣ್ಣೆವೆ!! ಕನಸು ಮನಸೂ ಹೊಂದಿವೆ ಜೇನು ಬಟ್ಟಲು ತಂದಿವೆ ಇಂಥ ಸಮಯದಿ ಬಂಧವೆ? ಏನು ಗೈದರು ಚೆಂದವೆ! ಬಾನಿನುದ್ದಕು ಭೂಮಿಯಗಲಕು ಎಲ್ಲಿಯೂ ಸ್ವಚ್ಛಂದವೆ! …..ಬಂತು! ಗಾಳಿ ತಣ್ಣನೆ […]
